ಮಡಿಕೇರಿ, ನ. 18: ಮೈಸೂರು, ಕೊಡಗು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ದೊರಕದೆ ಪ್ರಾದೇಶಿಕ ಅಸಮತೋಲನ ವುಂಟಾಗಿದೆ. ಆದರೆÀ, ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವÀರೆಲ್ಲರಿಗೂ ಕೂಡ ಸಚಿವ ಸ್ಥಾನ ನೀಡಲಾಗದ ಸಂದಿಗ್ಧತೆ ಎದುರಾಗಿದೆ. ಹೀಗಾಗಿ ಬೆಂಗಳೂರಿನ ಸಚಿವರುಗÀಳು ಕೊಡಗು, ಮೈಸೂರು ಮೊದಲಾದೆಡೆ ಉಸ್ತುವಾರಿ ಸಚಿವರುಗಳಾಗಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಮುಖ್ಯಮಂತ್ರಿಯವರು ಈ ಅಸಮತೋಲನ ಸರಿಪಡಿಸಲು ಯತ್ನಿಸಲಿ ಎಂದು ರಾಜ್ಯ ಬಿಜೆಪಿಯ ಪ್ರಮುಖರಲ್ಲಿ ಒಬ್ಬರಾದ ಮೈಸೂರಿನ ಮಾಜಿ ಶಾಸಕ ಗೋ ಮಧುಸೂದನ್ ಅಭಿಪ್ರಾಯಪಟ್ಟರು.ಇಂದು ಕರಿಕೆಯ ಭೂ ಸಮಸ್ಯೆಗೆ ಸಂಬಂಧಿಸಿದಂತೆ ವಿಚಾರಿಸಲು ಮಡಿಕೇರಿ ತಾಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ಅವರು “ಶಕ್ತಿ’’ ಕಚೇರಿಗೂ ಆಗಮಿಸಿದ್ದು ಪ್ರಸ್ತುತ ರಾಜಕಾರಣ ವಿದ್ಯಮಾನಗಳ ಕುರಿತು ಅನಿಸಿಕೆ ವ್ಯಕ್ತಪÀಡಿಸಿದರು.

ಕಾಂಗ್ರೆಸ್: ನಾಯಕತ್ವ ಕೊರತೆ

ಕಾಂಗ್ರೆÀಸ್ ಪಕ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಹ ನಾಯಕತ್ವದ ಕೊರತೆಯುಂಟಾಗಿದ್ದು ಇತ್ತೀಚಿನ ಚುನಾವಣೆಗಳಲ್ಲಿ

(ಮೊದಲ ಪುಟದಿಂದ) ಆ ಪಕ್ಷ ಸೋಲನುಭವಿಸಲು ಕಾರಣವಾಗಿದೆ. ರಾಜ್ಯದ ನಾಯಕರೊಬ್ಬರು ಈಗಾಗಲೇ ಹಲವು ಹಗರಣಗಳಲ್ಲಿ ಕಾನೂನಾತ್ಮಕ ಕ್ರಮವನ್ನು ಎದುರಿಸುತ್ತಿದ್ದು ಇದರಿಂದಾಗಿ ಜನರು ಬಿಜೆಪಿಯ ಉತ್ತಮ ನಾಯಕತ್ವದತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಗೋ ಮಧುಸೂದನ್ ವಿಶ್ಲೇಷಿಸಿದರು. ಜೆ.ಡಿ.ಎಸ್ ನ ನಾಯಕರೊಬ್ಬರು “ಬಾಡಿಗೆ ಸೈಕಲ್” ನಂತಾಗಿಬಿಟ್ಟಿದ್ದಾರೆ. ಇತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುರಿದ ಮೈತ್ರಿಯಿಂದಾಗಿ ಅಧಿಕಾರ ಕಳೆದುಕೊಂಡು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನ ಬಗ್ಗೆ ಒಲವು

“ನನ್ನ ತಂದೆ ಗೋಪಾಲಕೃಷ್ಣಾಚಾರ್ 1959 ರಲ್ಲಿ ಶ್ರೀಮಂಗಲದಲ್ಲಿ ಶಿಕ್ಷಕರಾಗಿದ್ದರು ಎಂದು ನೆನಪಿಸಿಕೊಂಡ ಮಧುಸೂದನ್ ಅವರು ಕೊಡಗಿನ ಜನರ ನೇರ ನುಡಿ, ಸಂಸ್ಕøತಿ, ಸೇನೆಯಲ್ಲಿ ಸಲ್ಲಿಸುತ್ತಿರುವ ಸೇವೆ ಅವಿಸ್ಮರಣೀಯ. ಕಾವೇರಿ ನೀರನ್ನು ನಾವೂ ಕುಡಿಯುತ್ತೇವೆ. ಕಾವೇರಿ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಅವರು ಈ ಸಂದರ್ಭ “ಶಕ್ತಿ” ಯೊಂದಿಗೆ ಮುಕ್ತ ನುಡಿಯಾಡಿದರು.

ಸಂಸದರ ಭಿನ್ನತೆ ಮರೆಯಾಗಲಿ

ಮಂಡ್ಯ ಸಂಸದೆ ಸುಮಲತ ಹಾಗೂ ಮೈಸೂರಿನ ಸಂಸದ ಪ್ರತಾಪ್ ಸಿಂಹ ನಡುವಿನ ಇತ್ತೀಚೆಗಿನÀ ಭಿನ್ನಮತದ ಕುರಿತು ಕೇಳಿದಾಗ “ಹೀಗಾಗಬಾರದಿತ್ತು., ವೈಯಕ್ತಿಕವಾಗಿ ಮಾತನಾಡುತ್ತಿದ್ದ ವಿಚಾರಗಳು ಕೆಲವರ ಚೇಷ್ಟೆಯಿಂದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಚಾರಗೊಂಡು ಸಂದಿಗ್ಧತೆಗೆ ಕಾರಣವಾಯಿತು. ಈ ವಿಚಾರ ಇನ್ನಾದರೂ ಬೆಳೆಯದೆ ಅಲ್ಲಿಗೇ ಕೊನೆಗೊಳ್ಳಲಿ ಎಂದು ಆಶಿಸಿದರು.

ತಾನು ಭೂ ವಿವಾದವೊಂದರ ಸಂಬಂಧ ವಿಚಾರಿಸಲೆಂದು ಕೊಡಗಿಗೆ ಇಂದು ಬಂದಿದ್ದು ಕೊಡಗಿನ ಭೂ ಕಾಯ್ದೆಗೂ ಕರ್ನಾಟಕದ ಇತರ ಭಾಗಗಳ ಕಾಯ್ದೆಗಳಿಗೂ ಬಹಳ ವ್ಯತ್ಯಾಸವಿದೆ. ಇದರಿಂದಾಗಿ ಕೊಡಗಿನ ಜನತೆಗೆ ಸಮಸ್ಯೆಯುಂಟಾಗಿದ್ದು ಈ ತಾರತಮ್ಯ ಬಗೆಹರಿಯಬೇಕಾಗಿದೆ ಎಂದು ಅವರು ಆಶಿಸಿದರು.

ಯಡಿಯೂರಪ್ಪ ಸರಕಾರ ಮರಾಠ ಮಂಡಳಿ ರಚಿಸಲು ನಿರ್ಧರಿಸಿರುವದರ ವಿರುದ್ಧದ ಪ್ರತಿಭಟನೆ ಕುರಿತು ಪ್ರಶ್ನಿಸಿದಾಗ ಇದೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದ ನಡೆಯುತ್ತಿರುವ ಪ್ರತಿಭಟನೆಯಾಗಿದೆ. ಮರಾಠ ಎನ್ನುವ ಜನಾಂಗವೇ ಇದ್ದು ಆ ಜನಾಂಗ ಕರ್ನಾಟಕ ಸೇರಿದಂತೆ ಎಲ್ಲ ಕಡೆ ಇದ್ದಾರೆ. ಶಿವಾಜಿ ಮಹಾರಾಜರ ತಂದೆ ಶಹಜಿರಾಜೇ ಭೋಸಲೆ ಕೂಡ ಬೆಂಗಳೂರಿನಲ್ಲ್ಲಿದ್ದವರು. ಆ ಜನಾಂಗದ ಅಭಿವೃದ್ಧಿಗೆ ಈ ಮಂಡಳಿ ರಚಿಸಲು ಉದ್ದೇಶಿಸಲಾಗಿದೆಯೇ ಹೊರತು ಭಾಷಾ ಪರಿಗಣನೆಯಿಂದಲ್ಲ. ಕನ್ನಡ ಭಾಷೆಯ ಮೇಲೆ ಇದರಿಂದ ಯಾವ ದುಷ್ಪರಿಣಾಮವೂ ಆಗುವದಿಲ್ಲ ಎಂದು ಮಧುಸೂದನ್ ಸಮರ್ಥಿಸಿದರು.