ಶನಿವಾರಸಂತೆ, ನ. 18: ಕೊಡ್ಲಿಪೇಟೆ ಹೊಸ ಮುನ್ಸಿಪಾಲಿಟಿಯ ನಿವಾಸಿ ವಿ.ಎಸ್. ಸಂದೀಪ್ ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಎಂಬವರನ್ನು ಮದುವೆಯಾಗಿ ಹೆಂಡತಿಯ ಮನೆಯಲ್ಲೇ ವಾಸವಿದ್ದು, ಸೋಮವಾರ ಸಂಜೆ ಗದ್ದೆಯಿಂದ ಹುಲ್ಲು ಕುಯ್ದು ತರುತ್ತಿರುವಾಗ ಅದೇ ಗ್ರಾಮದ ನಿವಾಸಿ ಆರೋಪಿ ದರ್ಶನ್ ದಾರಿ ತಡೆದು ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದು ಕೈ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ, ಗಾಯಗೊಳಿಸಿರುತ್ತಾನೆ. ಗಾಯಾಳು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನೀಡಿದ ಪುಕಾರಿನ ಮೇರೆ ಹೆಡ್ ಕಾನ್ಸ್ಟೇಬಲ್ ರವಿಚಂದ್ರ ಕಲಂ 323, 324, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.