ಭಾಗಮಂಡಲ, ನ. 18: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ತೊಡಿಸಲಾಗಿದ್ದ ಆಭರಣವನ್ನು ಇದೀಗ ಜಾತ್ರೆ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮರಳಿ ಕೊಂಡೊಯ್ಯಲಾಯಿತು. ಸಂಪ್ರದಾಯದಂತೆ ತಲಕಾವೇರಿ ಹಾಗೂ ಭಗಂಡೇಶ್ವರ ದೇಗುಲ ತಕ್ಕ ಮುಖ್ಯಸ್ಥರಾದ ಕೋಡಿ ಹಾಗೂ ಬಳ್ಳಡ್ಕ ಕುಟುಂಬಸ್ಥರು ದೇವಾಲಯ ಸಮಿತಿಯವರು ಆಭರಣವನ್ನು ಕೊಂಡೊಯ್ದು ದೇವಾಲಯ ವ್ಯವಸ್ಥಾಪನಾ ಸಮಿತಿ ಕಾರ್ಯ ನಿರ್ವಹಣಾಧಿಕಾರಿಗಳ ಸುಪರ್ದಿಗೆ ವಹಿಸಲಾಯಿತು.