ವೀರಾಜಪೇಟೆ, ನ. 18: ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿಯಮಿತ ವೀರಾಜಪೇಟೆ ಈ ಸಂಸ್ಥೆಯ ಅಧ್ಯಕ್ಷರಾಗಿ ಕಂಜಿತಂಡ ಮಂದಣ್ಣ, ಉಪಾಧ್ಯಕ್ಷರಾಗಿ ಚೇನಂಡ ಸುರೇಶ್ ನಾಣಯ್ಯ ಆಯ್ಕೆಯಾಗಿದ್ದಾರೆ. ಚುನಾವಣಾ ಸಂದರ್ಭ ನಿರ್ದೇಕರುಗಳಾದ ಕೊಲ್ಲಿರ ಗೋಪಿಚಿಣ್ಣಪ್ಪ, ಬಿ.ಎಂ ದೇವಯ್ಯ, ಕೋಡಿರ ಎಸ್ ಚಂಗಪ್ಪ, ಚೆರಿಯಪಂಡ ರಾಜನಂಜಪ್ಪ, ಕೆ.ಬಿ. ವಿಜಂiÀiನ್, ಹೆಚ್.ಪಿ. ಉದಂiÀi, ಅಮ್ಮೆಕಂಡ ದಮಯಂತಿ, ಕಾದಿರ ಯು. ಪಳಂಗಪ್ಪ, ಕಾಟುಮಣಿಯಂಡ ಉಮೇಶ್, ಬಾಚಮಂಡ ಕೆ.ಸುಬ್ರಮಣಿ, ಕುಡಿಯರ ಎ. ತಮ್ಮಯ್ಯ, ಅಪ್ಪಚ್ಚಿರ ಎಂ. ನೀಲಮ್ಮ ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಪಿ.ಬಿ. ಮೋಹನ್ ಕುಮಾರ್ ಕಾರ್ಯ ನಿರ್ವಹಿಸಿದರು.