ಮಡಿಕೇರಿ, ನ. 18: ಪ್ರಸ್ತುತದ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸಾಧನೆ ಅತ್ಯಂತ ಮಹತ್ವದ್ದಾಗಿದ್ದು ಇದಕ್ಕೆ ವಿಶೇಷ ಒತ್ತು ನೀಡುತ್ತಿರುವ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ಮೂಲಕ ಈ ಬಾರಿ ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ರೂ. 47.43 ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.855 ವಿದ್ಯಾರ್ಥಿಗಳು ಈ ಮೊತ್ತವನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ವಿವಿಧ ವಿಭಾಗಗಳಲ್ಲಿ ವಿಶೇಷವಾದ ಸಾಧನೆಯನ್ನು ತೋರಿರುವ ಒಟ್ಟು 28 ವಿದ್ಯಾರ್ಥಿ ಗಳಿಗೆ ಕೊಡವ ವಿದ್ಯಾನಿಧಿ ಹಾಗೂ ಅಮೇರಿಕಾ ಕೊಡವ ಕೂಟದ ಮೂಲಕವೂ ಪ್ರತ್ಯೇಕವಾಗಿ ರೂ. 8.77 ಲಕ್ಷ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ.ಸುಮಾರು 150 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಮಡಿಕೇರಿಯ ಕೊಡವ ವಿದ್ಯಾನಿಧಿಯ 104ನೇ ಮಹಾಸಭೆ ಇದಲ್ಲದೆ ವಿವಿಧ ವಿಭಾಗಗಳಲ್ಲಿ ವಿಶೇಷವಾದ ಸಾಧನೆಯನ್ನು ತೋರಿರುವ ಒಟ್ಟು 28 ವಿದ್ಯಾರ್ಥಿ ಗಳಿಗೆ ಕೊಡವ ವಿದ್ಯಾನಿಧಿ ಹಾಗೂ ಅಮೇರಿಕಾ ಕೊಡವ ಕೂಟದ ಮೂಲಕವೂ ಪ್ರತ್ಯೇಕವಾಗಿ ರೂ. 8.77 ಲಕ್ಷ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ.ಸುಮಾರು 150 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಮಡಿಕೇರಿಯ ಕೊಡವ ವಿದ್ಯಾನಿಧಿಯ 104ನೇ ಮಹಾಸಭೆ ಲಾಗಿತ್ತು.

ಶಿಕ್ಷಣಕ್ಕೆ ವಿದ್ಯಾನಿಧಿಯ ಮೂಲಕ ವಿಶೇಷ ಒತ್ತನ್ನು ನೀಡಲಾಗಿದ್ದು, ಹಲವಷ್ಟು ದಾನಿಗಳು ನೀಡಿರುವ ಸಹಾಯದಂತೆ (ಮೊದಲ ಪುಟದಿಂದ) ಅಧಿಕ ಮೊತ್ತದ ಸಂಗ್ರಹವಿದೆ. ವಿದ್ಯಾನಿಧಿಗೆ 2019ರ ಏಪ್ರಿಲ್‍ನಿಂದ ಈ ತನಕ ವಿವಿಧ ದಾನಿ ಗಳಿಂದ ರೂ. 1.16 ಕೋಟಿಯಷ್ಟು ಹಣ ಕೊಡುಗೆಯಾಗಿ ದೊರೆತಿದ್ದು ಒಟ್ಟು ರೂ. 9.91 ಕೋಟಿಯಷ್ಟು ಮೊತ್ತವನ್ನು ಈ ಸಂಸ್ಥೆ ಹೊಂದಿದೆ.

ವಿದ್ಯಾನಿಧಿಯ ಅಧ್ಯಕ್ಷರಾದ ಕೂತಂಡ ಪಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಸಲಹೆ-ಸೂಚನೆ, ಚರ್ಚೆಯೊಂದಿಗೆ ಲೆಕ್ಕಪತ್ರ, ವಾರ್ಷಿಕ ವರದಿಯನ್ನು ಅಂಗೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಆ ದಿನದಂದು 28 ಸಾಧಕ ವಿದ್ಯಾರ್ಥಿ ಗಳಿಗೆ (ಮೊದಲ ಪುಟದಿಂದ) ಅಧಿಕ ಮೊತ್ತದ ಸಂಗ್ರಹವಿದೆ. ವಿದ್ಯಾನಿಧಿಗೆ 2019ರ ಏಪ್ರಿಲ್‍ನಿಂದ ಈ ತನಕ ವಿವಿಧ ದಾನಿ ಗಳಿಂದ ರೂ. 1.16 ಕೋಟಿಯಷ್ಟು ಹಣ ಕೊಡುಗೆಯಾಗಿ ದೊರೆತಿದ್ದು ಒಟ್ಟು ರೂ. 9.91 ಕೋಟಿಯಷ್ಟು ಮೊತ್ತವನ್ನು ಈ ಸಂಸ್ಥೆ ಹೊಂದಿದೆ.

ವಿದ್ಯಾನಿಧಿಯ ಅಧ್ಯಕ್ಷರಾದ ಕೂತಂಡ ಪಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಸಲಹೆ-ಸೂಚನೆ, ಚರ್ಚೆಯೊಂದಿಗೆ ಲೆಕ್ಕಪತ್ರ, ವಾರ್ಷಿಕ ವರದಿಯನ್ನು ಅಂಗೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಆ ದಿನದಂದು 28 ಸಾಧಕ ವಿದ್ಯಾರ್ಥಿ ಗಳಿಗೆ ವೀರಾಜಪೇಟೆಯ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರು ಶಿಕ್ಷಣದ ಮಹತ್ವದೊಂದಿಗೆ ಪ್ರಸ್ತುತದ ಸನ್ನಿವೇಶ ದಲ್ಲಿ ಎದುರಾಗಿರುವ ಕೊರೊನಾ ಕುರಿತಾಗಿ ವಹಿಸಬೇಕಾದ ಮುಂಜಾಗ್ರತೆ ಗಳ ಕುರಿತು ಮಾತನಾಡಿದರು.

ಮತ್ತೋರ್ವ ಅತಿಥಿಯಾಗಿದ್ದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ತೀತಿರ ರೇಖಾ ವಸಂತ್ ಅವರು ಶಿಕ್ಷಣದ ಅಗತ್ಯತೆ ಹಾಗೂ ಶೈಕ್ಷಣಿಕ ಪ್ರಗತಿ ನೀತಿಯ ಕುರಿತು ವಿವರಿಸಿದರು. ಈ ಸಂದರ್ಭ ಈ ಬಾರಿ ಸಿ.ಇ.ಟಿ. ಹಾಗೂ ನೀಟ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ ತೋರಿರುವ ಪಾಸುರ ಆರ್ನವ್ ಅಯ್ಯಪ್ಪ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಅಧ್ಯಕ್ಷರಾದ ಕೆ.ಪಿ. ಉತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿಧಿಯ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

ಚೊಟ್ಟೆಯಂಡಮಾಡ ಬೇಬಿ ಪೂವಯ್ಯ ಪ್ರಾರ್ಥಿಸಿ, ಕೆ.ಪಿ. ಉತ್ತಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಕೊಂಗಂಡ ಎಸ್. ದೇವಯ್ಯ ವಂದಿಸಿದರು. ಕಾರ್ಯದರ್ಶಿ ಮೇದುರ ಕಾವೇರಪ್ಪ, ಮಾಜಿ ಸಚಿವ ಯಂ.ಸಿ. ನಾಣಯ್ಯ ಮತ್ತಿತರರು ಹಾಜರಿದ್ದರು.