ಮಡಿಕೇರಿ, ನ. 17: ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಸಮೂಹದ ವತಿಯಿಂದ ದೀಪಾವಳಿ ವಿಶೇಷ ಕಾವ್ಯ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಗುರು ಶರ್ಮರವರ ಪ್ರಾಯೋಜಕತ್ವದಲ್ಲಿ ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ವಾಟ್ಸ್ ಆ್ಯಪ್ ಬಳಗದಲ್ಲಿ ನಡೆದ ವಿಶೇಷ ಛಂದೋಬದ್ಧ ಕಾವ್ಯ ರಚನೆಯ ಸ್ಪರ್ಧೆಗೆ ಸುಮಾರು 78 ಕಾವ್ಯಗಳು ಬಂದಿದ್ದವು. ಪ್ರಥಮ ಬಹುಮಾನವನ್ನು ಪದ್ಮಾ ಆಚಾರ್ಯ ಪುತ್ತೂರು, ದ್ವಿತೀಯ ಬಹುಮಾನವನ್ನು ಹರಿನರಸಿಂಹ ಉಪಾಧ್ಯಾಯ ಬಂಟ್ವಾಳ, ತೃತೀಯ ಬಹುಮಾನವನ್ನು ಗಿರೀಶ್ ಕಿಗ್ಗಾಲು ಮೂರ್ನಾಡು ತಮ್ಮ ದಾಗಿಸಿಕೊಂಡಿದ್ದಾರೆ. ಇದರೊಂದಿಗೆ 10 ಸಮಾಧಾನಕರ ಬಹುಮಾನಗಳನ್ನು ಕೂಡ ನೀಡಲಾಗಿದೆ. ವಿಜೇತರಿಗೆ ಪ್ರಥಮ ರೂ. 1000, ದ್ವಿತೀಯ ರೂ. 600, ತೃತೀಯ ರೂ. 400 ನೀಡಲಾ ಯಿತು ಎಂದು ಪರಿಷತ್‍ನ ಸಂಸ್ಥಾಪಕ ಸಂಚಾಲಕ ವೈಲೇಶ್ ಪಿ.ಎಸ್. ಕೊಡಗು ತಿಳಿಸಿದ್ದಾರೆ.