ವೀರಾಜಪೇಟೆ, ನ. 17: ದೇಶದ ಆರ್ಥಿಕ ಪ್ರಗತಿ ಕಾಣಲು ಸಹಕಾರಿ ಕ್ಷೇತ್ರಗಳ ಪಾತ್ರ ಮುಖ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮುಖ್ಯ ಉದ್ದೇಶವಾಗಿದೆ. ಪ್ರಾಚೀನ ರಾಜರ ಕಾಲದಲ್ಲಿಯು ಸಹಕಾರ ಸಂಘಗಳು ನಂಬಿಕೆಯ ಮೇಲೆ ನಡೆಯುತ್ತಿದ್ದವು. ನಾಗರಿಕತೆ ಬೆಳೆದಂತೆ ಭಾರತದಲ್ಲಿ 115 ವರ್ಷಗಳ ಹಿಂದೆ ಸಹಕಾರ ಸಂಘಗಳು ಪ್ರಾರಂಭ ಗೊಂಡು ನಂಬಿಕೆ ಆಧಾರವನ್ನು ಬಿಟ್ಟು ದಾಖಲೆ ಪತ್ರಗಳು ಮತ್ತು ಇಬ್ಬರು ಜಾಮೀನಿನ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪಂದ್ಯಂಡ ಬೆಳ್ಯಪ್ಪ ಹಾಗೂ ಪಂದಿಕುತ್ತಿರ ಚಂಗಪ್ಪ ಇಬ್ಬರು ಮಹಾನ್ ವ್ಯಕ್ತಿಗಳನ್ನು ನಾವು ನೆನಪಿಸಿಕೊಳ್ಳಬೇಕು. ಪಂದ್ಯಂಡ ಬೆಳ್ಯಪ್ಪ 1928ರಲ್ಲಿ ಜಮೀನ್ದಾರ್ ಸಂಘವನ್ನು ಪ್ರಾರಂಭಿಸಿ ಸಹಕಾರಿ ದುರೀಣರೆನಿಸಿ ಕೊಂಡರು. ಪಂದಿಕುತ್ತಿರ ಚಂಗಪ್ಪ ಅವರು 1950 ರಲ್ಲಿ ಮಡಿಕೇರಿಯಲ್ಲಿ ವೀರಾಜಪೇಟೆ, ನ. 17: ದೇಶದ ಆರ್ಥಿಕ ಪ್ರಗತಿ ಕಾಣಲು ಸಹಕಾರಿ ಕ್ಷೇತ್ರಗಳ ಪಾತ್ರ ಮುಖ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮುಖ್ಯ ಉದ್ದೇಶವಾಗಿದೆ. ಪ್ರಾಚೀನ ರಾಜರ ಕಾಲದಲ್ಲಿಯು ಸಹಕಾರ ಸಂಘಗಳು ನಂಬಿಕೆಯ ಮೇಲೆ ನಡೆಯುತ್ತಿದ್ದವು. ನಾಗರಿಕತೆ ಬೆಳೆದಂತೆ ಭಾರತದಲ್ಲಿ 115 ವರ್ಷಗಳ ಹಿಂದೆ ಸಹಕಾರ ಸಂಘಗಳು ಪ್ರಾರಂಭ ಗೊಂಡು ನಂಬಿಕೆ ಆಧಾರವನ್ನು ಬಿಟ್ಟು ದಾಖಲೆ ಪತ್ರಗಳು ಮತ್ತು ಇಬ್ಬರು ಜಾಮೀನಿನ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪಂದ್ಯಂಡ ಬೆಳ್ಯಪ್ಪ ಹಾಗೂ ಪಂದಿಕುತ್ತಿರ ಚಂಗಪ್ಪ ಇಬ್ಬರು ಮಹಾನ್ ವ್ಯಕ್ತಿಗಳನ್ನು ನಾವು ನೆನಪಿಸಿಕೊಳ್ಳಬೇಕು. ಪಂದ್ಯಂಡ ಬೆಳ್ಯಪ್ಪ 1928ರಲ್ಲಿ ಜಮೀನ್ದಾರ್ ಸಂಘವನ್ನು ಪ್ರಾರಂಭಿಸಿ ಸಹಕಾರಿ ದುರೀಣರೆನಿಸಿ ಕೊಂಡರು. ಪಂದಿಕುತ್ತಿರ ಚಂಗಪ್ಪ ಅವರು 1950 ರಲ್ಲಿ ಮಡಿಕೇರಿಯಲ್ಲಿ ಭಾಗವಹಿಸುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಇದ್ದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ. 1905 ಮೇ 22 ರಂದು ಶನಿವಾರಸಂತೆಯ ತಳ್ತರೆಶೆಟ್ಟಳ್ಳಿಯಲ್ಲಿ ಪ್ರಥಮ ಸಹಕಾರ ಸಂಘ ಪ್ರಾರಂಭಗೊಂಡಿತು. ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕದ 32 ಜಿಲ್ಲೆಯಲ್ಲಿ ಕೊಡಗು ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಯುವಕರು ಮುಂದೆ ಬರುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಲಭಿಸುವ ಎಲ್ಲಾ ಸೇವೆಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಇದ್ದರು ಕೂಡ ಯುವಕರು ವ್ಯವಸ್ಥೆಗೆ ಹೊಂದಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಇದೇ ಸಂದರ್ಭ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಹಕಾರಿಗಳಾದ ಬಿ.ಜಿ ಪುರುಷೋತಮ್, ಪಟ್ಟಡ ಕೆ ಪೂವಣ್ಣ, ಅಚ್ಚಪಂಡ ಪೂವಮ್ಮ ಅವರುಗಳನ್ನು ಸನ್ಮಾನಿಸಿದರು. ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘು ನಾಣಯ್ಯ, ಮಡಿಕೇರಿ ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಯೂನಿಯನ್ ನಿರ್ದೇಶಕರಾದ ಹೊಟ್ಟೆಂಗಡ ರಮೇಶ್, ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡಪಾಲ ಗಣಪತಿ, ಪೆಮ್ಮಂಡ ಭರತ್, ಕೊಂಗಂಡ ವಾಸು ಮುದ್ದಯ್ಯ, ಕೋಲತಂಡ ಸುಬ್ರಮಣಿ, ಸಿಇಒ ಯೊಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.