ಮಡಿಕೇರಿ, ನ.18: ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ಮತ್ತು ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗರವರ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಕಳ್ಳಭಟ್ಟಿ, ಸೇಂದಿ. ಬೆಲ್ಲದ ಕೊಳೆ ಸೇರಿದಂತೆ ಅಕ್ರಮ ಮದ್ಯ ಮಾರಾಟ ಸಂಬಂಧಿತ ಹಾಗೂ ಗಾಂಜಾ, ಡ್ರಗ್ಸ್, ಅಫೀಮು ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಸೇವನೆ, ಮಾರಾಟ ನಿಯಂತ್ರಿಸುವ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸುವಂತೆ ಅಬಕಾರಿ ಉಪ ಆಯುಕ್ತೆÀ್ತ ಬಿಂದುಶ್ರೀ ಅವರು ಕೋರಿದ್ದಾರೆ.
ಅಬಕಾರಿ ಉಪ ಆಯುಕ್ತರ ಕಚೇರಿ, ಮಡಿಕೇರಿ, ಕಂಟ್ರೋಲ್ ರೂಂ ದೂ. 08272-229110 (ಟೋಲ್ ಫ್ರೀ), ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ ಅಬಕಾರಿ ನಿರೀಕ್ಷಕರು 9449252456/ 9448675495, ಅಬಕಾರಿ ನಿರೀಕ್ಷಕರ ಕಚೇರಿ, ವೀರಾಜಪೇಟೆ ವಲಯ ಅಬಕಾರಿ ನಿರೀಕ್ಷಕರು 9449597141ನ್ನು ಸಂಪರ್ಕಿಸಬಹುದು.