ನಾಪೆÉÇೀಕ್ಲು, ನ. 17: ನಾಲ್ಕುನಾಡಿನ ಗ್ರಾಮಾಂತರ ಹಾಕಿ ಪಂದ್ಯಾಟವನ್ನು ಹಾಕಿ ಕೂರ್ಗ್ ಸಹಯೋಗದೊಂದಿಗೆ, ಕುಲ್ಲೇಟಿರ ಕುಟುಂಬ ಮತ್ತು ಶಿವಾಜಿ ಯೂತ್ ಕ್ಲಬ್ ವತಿಯಿಂದ ಮುಂದಿನ ಡಿಸೆಂಬರ್ 19.20.21 ರಂದು ಮೂರು ದಿನಗಳ ಕಾಲ ನಾಪೆÉÇೀಕ್ಲು ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲು ಆಯೋಜಿಸಲಾಗಿದೆ.
ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು 2018 ರಲ್ಲಿ ನಾಪೆÉÇೀಕ್ಲುವಿನಲ್ಲಿ ಕುಲ್ಲೇಟಿರ ಕುಟುಂಬದವರು ಕೌಟುಂಬಿಕ ಹಾಕಿ ಹಬ್ಬವನ್ನು ನಡೆಸುವ ಸಂದರ್ಭ ಮೈಸೂರು - ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹರವರು ಸುಮಾರು 20 ಲಕ್ಷ ಅನುದಾನವನ್ನು ಹಾಕಿ ಹಬ್ಬಕ್ಕೆ ನೀಡಿದರು. ಈ ಅನುದಾನವನ್ನು ಕುಲ್ಲೇಟಿರ ಕುಟುಂಬದವರು ಹಾಕಿ ಹಬ್ಬಕ್ಕೆ ಉಪಯೋಗಿಸದೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಮಿನಿ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಿದಂತೆ ಈಗಾಗಲೇ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಇದರ ಪ್ರಯುಕ್ತ ಮಿನಿ ಕ್ರೀಡಾಂಗಣವನ್ನು ಸಂಸದರಾದ ಪ್ರತಾಪ್ ಸಿಂಹರವರಿಂದ ಉದ್ಘಾಟಿಸಲಾಗುವುದು. ಇದೇ ಸಂದರ್ಭ ಹಾಕಿ ಪಂದ್ಯಾಟವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಮೂರು ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ನಾಲ್ಕು ನಾಡಿಗೆ ಸೇರಿದ ತಂಡಗಳು ಮಾತ್ರ ಭಾಗವಹಿಸಲಿದ್ದು ಜಯಗಳಿಸುವ ತಂಡಗಳಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಅದರಂತೆ ಇದೇ ಸಂದರ್ಭ 14 ವರ್ಷದೊಳಗಿನ ಮಕ್ಕಳಿಗೂ ಪಂದ್ಯಾಟವನ್ನು ಏರ್ಪಡಿಸಲಾಗಿದ್ದು ಅವರಿಗೂ ನಗದು ಸೇರಿದಂತೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು 2 ಸಾವಿರ ಮೈದಾನ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಚಾಳಿಯಂಡ ಅಂಬಿ ಕಾರ್ಯಪ್ಪ. 9448647337, ಕುಲ್ಲೇಟಿರ ಅರುಣಾ ಬೇಬ.9448647326, ಕೇಲೇಟಿರ ದೀಪು ದೇವಯ್ಯ 9686869213, ಅವರನ್ನು ಸಂಪರ್ಕಿಸಲು ಕೋರಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕುಲ್ಲೇಟಿರ ಕುಟುಂಬದ ಹಾಕಿ ಹಬ್ಬದ ಕಾರ್ಯದರ್ಶಿ ಅಜಿತ್ ನಾಣಯ್ಯ, ಅರುಣ ಬೇಬ, ಶಿವಾಜಿ ಯೂತ್ ಕ್ಲಬ್ಬಿನ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಕೇಲೇಟಿರ ದೀಪು ದೇವಯ್ಯ, ಅರೆಯಡ ರತ್ನ ಪೆಮ್ಮಯ್ಯ, ಕುಂಚೇಟ್ಟಿರ ಸುಧಿ, ಉತ್ತಪ್ಪ, ನಾಯಕಂಡ ದೀಪು, ಕುಂಡ್ಯೋಳಂಡ ಬಿಪಿನ್, ಕೇಲೇಟಿರ ಕಾಳಪ್ಪ, ಪೊರ್ಕೊಂಡ ಅನೀಲ್, ಬೊಟ್ಟೋಳಂಡ ಚೇತನ್ ಇದ್ದರು.