ಸುಂಟಿಕೊಪ್ಪ, ನ. 17: ಕಂಬಿಬಾಣೆ ವೃತ್ತದ ಅತ್ತೂರು ನಲ್ಲೂರು, 7ನೇ ಹೊಸಕೋಟೆ ಗ್ರಾಮ ಪೌತಿ ಖಾತೆ ಬದಲಾವಣೆ ಆಂದೋಲನವನ್ನು ತಾ. 18 ರಂದು (ಇಂದು) ಆಯೋಜಿಸಲಾಗಿದ್ದು, ಸಾರ್ವಜನಿಕರು ಪೌತಿ ಖಾತೆದಾರರು ಸದುಪಯೋಗಪಡಿಸಿಕೊಳ್ಳುವಂತೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ತಿಳಿಸಿದ್ದಾರೆ. 7ನೇ ಹೊಸಕೋಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಗಂಣದಲ್ಲಿ ಕಂಬಿಬಾಣೆ ವೃತ್ತದ ಅತ್ತೂರು ನಲ್ಲೂರು, 7ನೇ ಹೊಸಕೋಟೆ ಗ್ರಾಮಗಳ ಪೌತಿ ಖಾತೆ ಬದಲಾವಣೆ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಸುಂಟಿಕೊಪ್ಪ ನಾಡಕಚೇರಿಯ ಉಪತಹಶೀಲ್ಧಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಸಭೆಗೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.