ನಾಪೆÇೀಕ್ಲು, ನ. 15: ಮಡಿಕೇರಿ ತಾಲೂಕು ಅರ್ವತ್ತೋಕ್ಲು, ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಬೀಜೋಪಚಾರ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯೆ ತುಮುತಜ್ಜಿರ ಕುಮುದಾ ರಶ್ಮಿ ಉದ್ಘಾಟಿಸಿದರು. ಕೃಷಿ ತರಬೇತಿ ಕೇಂದ್ರದ ಬಸವಲಿಂಗ ರೆಡ್ಡಿ ಕೃಷಿ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಳೂರು ಕಿಶೋರ್ ಕುಮಾರ್, ವಿದ್ಯಾ, ವರದರಾಜ್, ದಿಲೀಪ್, ಕೃಷಿ ಇಲಾಖೆಯ ಸಿಬ್ಬಂದಿಗಳು, ಅರ್ವತೊಕ್ಲು, ಬಿಳಿಗೇರಿ, ಕುಂಬಳದಾಳು ಗ್ರಾಮಸ್ಥರು ಹಾಜರಿದ್ದರು.