ಕುಶಾಲನಗರ, ನ.15: ಗ್ರೀನ್ ಪಟಾಕಿ ಹೆಸರಿನಲ್ಲಿ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ಆರೋಪದ ಹಿನ್ನಲೆ ಸ್ಥಳೀಯ ಬೈಚನಹಳ್ಳಿ ಪಟಾಕಿ ಮಾರಾಟ ಮಳಿಗೆಯಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತು.
ಗ್ರೀನ್ ಪಟಾಕಿ ಲೈಸನ್ಸ್ ಹೊಂದಿ ಇತರೆ ಕಂಪನಿಗಳ ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂದು ಕುಮಾರ್ ಎಂಬವರು ಆರೋಪಿಸಿ ವಹಿವಾಟಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಕುಮಾರ್ ಹಾಗೂ ಪಟಾಕಿ ವ್ಯಾಪಾರಿ ನಡುವೆ ಮಾತಿನ ಚಕಮಕಿ ನಡೆಯಿತು.
ಮಾಹಿತಿ ಅರಿತು ಸ್ಥಳಕ್ಕೆ ಭೇಟಿ ನೀಡಿದ ಸಿಐ ಮಹೇಶ್ ಮತ್ತು ಎಸ್‍ಐ ಗಣೇಶ್ ಅವರುಗಳು ಪಟಾಕಿಗಳ ಪರಿಶೀಲನೆ ನಡೆಸಿದರು. ಈ ವೇಳೆ ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ಹಸಿರು ಪಟಾಕಿ ಎಂದು ಖಚಿತಗೊಂಡ ನಂತರ ಪರಿಸ್ಥಿತಿ ತಿಳಿಯಾಯಿತು.