ಸಿದ್ದಾಪುರ, ನ. 15: ಅರೆಕಾಡು ಗ್ರಾಮದ ಬಳಂಜಿ ಕೆರೆ ಬಳಿ ಇರುವ ಶ್ರೀ ಐದ್ರೋಡಮ್ಮ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ ಸರಳವಾಗಿ ನಡೆಯಿತು. ಬೆಳಗಿನಿಂದಲೇ ಪೂಜಾಕೈಂಕರ್ಯಗಳು ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ದೇವಾಲಯ ಟ್ರಸ್ಟಿನ ಪ್ರಮುಖರಾದ ರಘು ಆನಂದ, ತಿರುಮಲ ರಾಜ ಹಾಗೂ ಪದಾಧಿಕಾರಿಗಳು ಹಾಜರಿದ್ದರು.