ಮಡಿಕೇರಿ, ನ. 15: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ನಡೆದ ಸಮಾರಂಭದಲ್ಲಿ ಮೈಕ್ರೋ ಎಟಿಎಂ ಯಂತ್ರವನ್ನು ಜಿಲ್ಲೆಗೆ ಆಗಮಿಸಿದ್ದ ನಬಾರ್ಡ್ ಸಂಸ್ಥೆಯ ಕರ್ನಾಟಕ ಸ್ಥಾನೀಯ ಮುಖ್ಯ ಪ್ರಬಂಧಕ ನೀರಜ್‍ಕುಮಾರ್ ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಸ್ತಾಂತರಿಸಿದರು.
ಯಂತ್ರವನ್ನು ಸಂಘದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರೂ ಆಗಿರುವ ಕಿಮ್ಮುಡಿರ ಜಗದೀಶ್ ಅವರು ಸ್ವೀಕರಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ನಬಾರ್ಡ್ ಪ್ರಾಯೋಜಕತ್ವದೊಂದಿಗೆ, ಜಿಲ್ಲೆಯ 30 ಸಹಕಾರ ಸಂಘಗಳಿಗೆ ಮೈಕ್ರೋ ಎ.ಟಿ.ಎಂ.ಗಳ ಅಳವಡಿಕೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೈಕ್ರೊ ಎ.ಟಿ.ಎಂ. ವಿತರಣಾ ಸಮಾರಂಭದಲ್ಲಿ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಪಿ.ವಿ. ಶ್ರೀನಿವಾಸ್, ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ.ಕೆ. ಪೂವಯ್ಯ ಹಾಜರಿದ್ದರು.