ಮಡಿಕೇರಿ, ನ. 14: ಹರಿಯಾಣ ರಾಜ್ಯದ ಪರಿದಾಬಾದ್‍ನಲ್ಲಿ ಹಿಂದೂ ಯುವತಿ ನಿಕಿತಾ ತೋಮರ್ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಗುಂಡು ಹಾರಿಸಿ ನಡುಬೀದಿಯಲ್ಲಿ ಹತ್ಯೆಗೈದ ತೌಫೀಕ್ ಹಾಗೂ ರೆಹಾನ್‍ಗೆ ಗಲ್ಲು ಶಿಕ್ಷೆ ವಿಧಿಸಬೇಕು, ಲವ್ ಜಿಹಾದ್, ಮತಾಂತರ ಹಾಗೂ ಗೋಹತ್ಯೆ ನೆಷೇಧಕ್ಕೆ ಕಠಿಣ ಕಾನೂನು ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮಾದಾಪುರ ದಲ್ಲಿ ಹಿಂದೂ ಜಾಗರಣಾ ವೇದಿಕೆ ಯಿಂದ ಪ್ರತಿಭಟನೆ ನಡೆಸಲಾಯಿತು.

ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಮಾದಾಪುರ ಇವರ ನೇತೃತ್ವದಲ್ಲಿ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಹಿಂಜಾವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಡಿಕೇರಿ ತಾಲೂಕು ಹಿಂಜಾವೇ ಪ್ರಚಾರ ಪ್ರಮುಖ್ ವಿವೇಕ್ ಕಡಗದಾಳು, ಮಾದಾಪುರ ಮಂಡಲದ ಸಂಘದ ಪ್ರಮುಖರು, ಹಿಂಜಾವೇ ಮಾದಾಪುರ ವಲಯ ಪ್ರಮುಖರು, ವಿವಿಧ ಘಟಕ ಗಳ ಪ್ರಮುಖರು ಮತ್ತು ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.