ಶನಿವಾರಸಂತೆ, ನ. 13: ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಗೆ ಹೊಸದಾಗಿ ಬಡ್ತಿ ಪಡೆದು ಬಂದಿರುವ ಕೆ.ಜೆ. ಮದುಸೂದನ್ ಅವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭ ಕರವೇ ತಾಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್ ಮಾತನಾಡಿ, ಅಧಿಕಾರಗಳಿಗೆ ಕರವೇ ಕಾರ್ಯಕರ್ತರು ಬೆಂಬಲ ಕೊಡುವುದು ಕರ್ತವ್ಯವಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮದುಸೂದನ್ ಶನಿವಾರಸಂತೆಯ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭ ಕರವೇ ತಾಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ, ಕರವೇ ತಾಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್, ಶನಿವಾರಸಂತೆ ಹೋಬಳಿ ಅಧ್ಯಕ್ಷ ಆನಂದ, ಕರವೇ ಚನ್ನಾಪುರ ಗ್ರಾಮ ಘಟಕದ ಉಪಾಧ್ಯಕ್ಷ ಲೂಯಿಸ್, ಕರವೇ ನಿಡ್ತ ಗ್ರಾಮ ಘಟಕದ ಅಧ್ಯಕ್ಷ ಯತೀಶ್, ಕರವೇ ಕಾರ್ಯಕರ್ತರಾದ ರಕ್ಷಿತ್, ಡಿಯೋನ್ ಡಿಸೋಜ ಭಾಗವಹಿಸಿದ್ದರು.