ಶನಿವಾರಸಂತೆ, ನ. 13: ಪಟ್ಟಣದ ರೋಟರಿ ಸಂಸ್ಥೆ ಕಚೇರಿಯಲ್ಲಿ ಉಡುಪಿಯ ಮೋದಿ ಕೇರ್ ಸಂಸ್ಥೆ ವತಿಯಿಂದ ಸ್ವದೇಶಿ ವಸ್ತು ಬಳಸಿ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಉಡುಪಿಯ ಮೋದಿ ಕೇರ್ ಸಂಸ್ಥೆ ಪ್ರಧಾನ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ, ಸ್ವದೇಶಿ ವಸ್ತುಗಳು, ಅವುಗಳ ಬಳಕೆ, ಗುಣಮಟ್ಟ ಮತ್ತು ಉಪಯೋಗದ ಕುರಿತು ಮಾಹಿತಿ ನೀಡಿದರು. ಮೋದಿ ಕೇರ್ ಸಂಸ್ಥೆ ನಿರ್ದೇಶಕರಾದ ಜಗನ್ನಾಥ್ ಶೆಟ್ಟಿ ಹಾಗೂ ರಘುರಾಂ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ವಿ. ದಿವಾಕರ್ ವಹಿಸಿದ್ದರು. ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್ ಹಾಗೂ ಸದಸ್ಯರು ಹಾಜರಿದ್ದರು.