*ಗೋಣಿಕೊಪ್ಪಲು, ನ. 13: ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಪಂಗಡದವರಿಗೆ ನೀಡುವ ಕೇಂದ್ರಿಯ ವಿಶೇಷ ನೇರ ಸಾಲ ಯೋಜನೆಯಡಿ ರೂ. 9.20 ಲಕ್ಷ ಮೊತ್ತದ ಬೊಲೆರೋ ಪಿಕ್ಅಪ್ ವಾಹನವನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಫಲಾನುಭವಿ ಹೊಸೂರು ನಾಗರಾಜು ಅವರಿಗೆ ವಾಹನವನ್ನು ಹಸ್ತಾಂತರಿಸಿದರು. ರೂ. 5 ಲಕ್ಷ ಸಹಾಯಧನ ಹೊಂದಿರುವ ಈ ಯೋಜನೆಯಲ್ಲಿ ಯುವಕರು ಸ್ವಉದ್ಯೋಗದಲ್ಲಿ ತೊಡಗಿಕೊಳ್ಳಲು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶಾಸಕರು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಜಿಲ್ಲಾ ಸಮನ್ವಯ ಅಧಿಕಾರಿ ಶಿವಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಜಿ. ಗುರುಶಾಂತಪ್ಪ, ತಾಲೂಕು ಪಶು ವೈದ್ಯಾಧಿಕಾರಿ ತಿಮ್ಮಯ್ಯ ಹಾಜರಿದ್ದರು.