ಕುಶಾಲನಗರ, ನ. 13: ಖಾಸಗಿ ಏಜೆನ್ಸಿಯವರು ತಮ್ಮಲ್ಲಿ ಬಳಕೆಯಾಗದೆ ಬಾಕಿಯಾಗಿರುವ ಕೂದಲಿಗೆ ಬಳಸುವ ಬಣ್ಣದ ದ್ರವ ಮತ್ತು ಪೌಡರ್ ಪ್ಯಾಕ್‍ಗಳು ಮತ್ತು ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆದು ತೆರಳಿದ್ದು, ಅವರನ್ನು ಪತ್ತೆ ಮಾಡಿ ಕುಶಾಲನಗರ, ನ. 13: ಖಾಸಗಿ ಏಜೆನ್ಸಿಯವರು ತಮ್ಮಲ್ಲಿ ಬಳಕೆಯಾಗದೆ ಬಾಕಿಯಾಗಿರುವ ಕೂದಲಿಗೆ ಬಳಸುವ ಬಣ್ಣದ ದ್ರವ ಮತ್ತು ಪೌಡರ್ ಪ್ಯಾಕ್‍ಗಳು ಮತ್ತು ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆದು ತೆರಳಿದ್ದು, ಅವರನ್ನು ಪತ್ತೆ ಮಾಡಿ ಮತ್ತು ಪಂಚಾಯ್ತಿ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಕಂಡು ಬಂದ ತ್ಯಾಜ್ಯದ ನಡುವೆ ಇದ್ದ ರಶೀದಿಗಳ ಮೂಲಕ ಮಾಲೀಕರನ್ನು ಪತ್ತೆ ಹಚ್ಚಿ ಅವರನ್ನು ಸ್ಥಳಕ್ಕೆ ಕರೆಸಿ ಛೀಮಾರಿ ಹಾಕಿದಲ್ಲದೆ ಅವರ ಕೈಯಲ್ಲೆ ಕಸವನ್ನು ತೆರವುಗೊಳಿಸಿದರು .

ಈ ಸಂದರ್ಭ ಉಪಾಧ್ಯಕ್ಷೆ ಸುರಯ್ಯಭಾನು, ಪ.ಪಂ ಸದಸ್ಯರಾದ ಅಮೃತ್ ರಾಜ್, ಸುರೇಶ್, ಕೆ.ಜಿ.ಮನು, ಮುಖ್ಯ ಅಧಿಕಾರಿ ಸುಜಯ್‍ಕುಮಾರ್, ಸ್ಥಳೀಯರಾದ ಡಿ.ಸಿ.ಮಂಜು, ಪ್ರಶಾಂತ್, ಶೇಖರ್‍ಗೌಡ ಮತ್ತಿತರರು ಇದ್ದರು.