ಮಡಿಕೇರಿ, ನ. 12: ನೆಲ್ಲಿಹುದಿಕೇರಿ ಸಮೀಪದ ನಿವಾಸಿ ಸುರೇಶ ಎಸ್. (39) ನಾಪತ್ತೆಯಾಗಿದ್ದು, ಇವರ ಅತ್ತೆ ಪಾಪ ಎಂಬವರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 30 ರಂದು ನೆಲ್ಲಿಹುದಿಕೇರಿಯ ತನ್ನ ನಿವಾಸದಿಂದ ತೆರಳಿದವರು ಇನ್ನೂ ಕೂಡ ವಾಪಸ್ ಬಂದಿಲ್ಲದಿರುವುದಾಗಿ ದೂರು ನೀಡಿದ್ದಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತರೆ ಸಿದ್ದಾಪುರ ಪಿ.ಎಸ್.ಐ. 08274-258333 ಅನ್ನು ಸಂಪರ್ಕಿಸಲು ಕೋರಿದೆ.