ಗೋಣಿಕೊಪ್ಪಲು, ನ. 12: ಹುಣಸೂರಿನ ವನ್ಯಜೀವಿ ವಿಭಾಗದ ಅರಣ್ಯ ಭವನದ ಕಚೇರಿಯಲ್ಲಿ ಕೊಡಗು-ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಸಮ್ಮುಖದಲ್ಲಿ ಕೊಡಗಿನ ರೈತರ ಸಮಸ್ಯೆಗಳ ಬಗ್ಗೆ ಸಭೆ ನಡೆಯಿತು. ಸಭೆಯಲ್ಲಿ ಕೊಡಗು ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ನೀಡಿ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಸ್ವಂತ ಉಪಯೋಗಕ್ಕೆ ರೈತರಿಗೆ ಮರ ಕಡಿಯಲು ಅವಕಾಶ, ತಕ್ಷಣ ಪುಂಡಾನೆ ಸೆರೆ, ಹುಲಿ ಸೆರೆಗೆ, ಮರಗಳ್ಳರ ಮೇಲೆ ಕ್ರಮ ಕೈಗೊಳ್ಳುವುದು, ರೈತರಿಗೆ ಇಲಾಖೆಯಿಂದ ಸಿಗುವ ಪರಿಹಾರಗಳು ತಕ್ಷಣವೇ ನೀಡಬೇಕು ಸೇರಿದಂತೆ ಜಿಲ್ಲೆಯ ವಿವಿಧ 14 ಸಮಸ್ಯೆಗಳಿಗೆ ಕ್ರಮ ಕೈಗೊಳ್ಳುವಂತೆ ಮನು ಸೋಮಯ್ಯ ಅಧಿಕಾರಿಗಳಲ್ಲಿ ಗೋಣಿಕೊಪ್ಪಲು, ನ. 12: ಹುಣಸೂರಿನ ವನ್ಯಜೀವಿ ವಿಭಾಗದ ಅರಣ್ಯ ಭವನದ ಕಚೇರಿಯಲ್ಲಿ ಕೊಡಗು-ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಸಮ್ಮುಖದಲ್ಲಿ ಕೊಡಗಿನ ರೈತರ ಸಮಸ್ಯೆಗಳ ಬಗ್ಗೆ ಸಭೆ ನಡೆಯಿತು. ಸಭೆಯಲ್ಲಿ ಕೊಡಗು ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ನೀಡಿ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಸ್ವಂತ ಉಪಯೋಗಕ್ಕೆ ರೈತರಿಗೆ ಮರ ಕಡಿಯಲು ಅವಕಾಶ, ತಕ್ಷಣ ಪುಂಡಾನೆ ಸೆರೆ, ಹುಲಿ ಸೆರೆಗೆ, ಮರಗಳ್ಳರ ಮೇಲೆ ಕ್ರಮ ಕೈಗೊಳ್ಳುವುದು, ರೈತರಿಗೆ ಇಲಾಖೆಯಿಂದ ಸಿಗುವ ಪರಿಹಾರಗಳು ತಕ್ಷಣವೇ ನೀಡಬೇಕು ಸೇರಿದಂತೆ ಜಿಲ್ಲೆಯ ವಿವಿಧ 14 ಸಮಸ್ಯೆಗಳಿಗೆ ಕ್ರಮ ಕೈಗೊಳ್ಳುವಂತೆ ಮನು ಸೋಮಯ್ಯ ಅಧಿಕಾರಿಗಳಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ರೈತರ ಮನವಿಯನ್ನು ಸ್ವೀಕರಿಸಿದ ಕೊಡಗು-ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್, ಆನೆ ದಾಳಿಯಿಂದ ಕೊಳತ್ತೋಡು-ಬೈಗೋಡುವಿನಲ್ಲಿ ಮೃತಪಟ್ಟ ವ್ಯಕ್ತಿಗೆ ತಕ್ಷಣವೇ ಪರಿಹಾರ ವಿತರಿಸುವುದು, ಸುಳುಗೋಡು ಗ್ರಾಮದ ಮುದ್ದೆಯಡ ನಂಜಪ್ಪ ಅವರ ಕೊಟ್ಟಿಗೆ ಕಾಮಗಾರಿಯನ್ನು ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಪೂರ್ಣ ಗೊಳಿಸುವುದು, ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ ಎರಡು ಗಂಟೆಯ ಒಳಗೆ ಸ್ಥಳದಲ್ಲಿ ಹುಲಿ ಸೆರೆಗೆ ಬೋನ್‍ಅನ್ನು ಅಳವಡಿಸುವುದು, ರೈತರಿಗೆ ಇಲಾಖೆ ವತಿಯಿಂದ ಬರಬೇಕಾದ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವುದು, ಮಂಗಗಳ ಹಾವಳಿಯನ್ನು ನಿಯಂತ್ರಿಸಲು ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದು ಸೇರಿದಂತೆ ಮರಗಳ್ಳರು ಬೀಟಿ ಮರವನ್ನು ಸಾಗಿಸಿದ ಪ್ರಕರಣದ ವಿಷಯದಲ್ಲಿ ಸ್ವತಃ ತಾನೇ ತನಿಖೆಯನ್ನು ಕೈಗೆತ್ತಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ರೈತ ಮುಖಂಡರಿಗೆ ಭರವಸೆ ನೀಡಿದರು.

ಈ ಸಂದರ್ಭ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಹಿರಿಯ ವಕೀಲ ಹೇಮಚಂದ್ರ, ಅರಣ್ಯ ಅಧಿಕಾರಿಗಳಾದ ಹುಣಸೂರಿನ ಡಿಸಿಎಫ್ ಮಹೇಶ್, ಚಕ್ರಪಾಣಿ, ಸತೀಶ್, ರೋಶ್ನಿ, ಆರ್‍ಎಫ್‍ಒ ಅಶೋಕ್ ಹುನಗುಂದ, ಶ್ರೀಮಂಗಲ, ನಾಗರಹೊಳೆ, ಪೊನ್ನಂಪೇಟೆ, ತಿತಿಮತಿ, ವೀರಾಜಪೇಟೆ ವಿಭಾಗದ ಎಸಿಎಫ್ ಹಾಗೂ ಡಿಎಫ್.ಆರ್.ಎಫ್.ಒ. ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್