ಪೆÇನ್ನಂಪೇಟೆ, ನ. 12: ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಕೋವಿಡ್ ಕಾಲದಲ್ಲಿ ಸಾಟಿ ಇಲ್ಲದ ಸೇವೆ ನೀಡಿದ ಕೆಲವು ವೈದ್ಯರು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕೋವಿಡ್ ಕಾಲದಲ್ಲಿ ಮಾನವೀಯತೆಯ ಗುಣಗಳನ್ನು ಹೊಂದಿರುವ ಈ ವೈದ್ಯರ ಸೇವೆ ಅನನ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದ ಸಮೀಪ ವಿರುವ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ, ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ನಿಸ್ವಾರ್ಥವಾಗಿ ಆರೋಗ್ಯ ಸೇವೆ ನೀಡಿರುವ ಮೂರ್ನಾಡಿನ ಪೆÇನ್ನಂಪೇಟೆ, ನ. 12: ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಕೋವಿಡ್ ಕಾಲದಲ್ಲಿ ಸಾಟಿ ಇಲ್ಲದ ಸೇವೆ ನೀಡಿದ ಕೆಲವು ವೈದ್ಯರು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕೋವಿಡ್ ಕಾಲದಲ್ಲಿ ಮಾನವೀಯತೆಯ ಗುಣಗಳನ್ನು ಹೊಂದಿರುವ ಈ ವೈದ್ಯರ ಸೇವೆ ಅನನ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದ ಸಮೀಪ ವಿರುವ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ, ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ನಿಸ್ವಾರ್ಥವಾಗಿ ಆರೋಗ್ಯ ಸೇವೆ ನೀಡಿರುವ ಮೂರ್ನಾಡಿನ ಅವರು, ಒಬ್ಬ ವೈದ್ಯರಾಗಿ ಕೇವಲ ವೃತ್ತಿ ಧರ್ಮವನ್ನಷ್ಟೇ ಪಾಲಿಸಿದ್ದೇನೆ. ಆದರೆ ಚಿಕಿತ್ಸೆಗಾಗಿ ಭರವಸೆಯಿಟ್ಟು ಬರುವ ಯಾವುದೇ ರೋಗಿಗಳನ್ನು ಕೋವಿಡ್ ನೆಪ ಹೇಳಿ ವಾಪಸು ಕಳಿಸಲಿಲ್ಲ ಎಂಬ ಸಮಾಧಾನ ತಮಗಿದೆ. ಕೋವಿಡ್ ಕಾಲದ ಈ ಸೇವೆ ಹೆಚ್ಚು ತೃಪ್ತಿ ನೀಡಿದೆ ಎಂದರಲ್ಲದೆ, ಯಾವುದೇ ನಿರೀಕ್ಷೆಗಳಿಲ್ಲದೆ ಕೆಲಸ ಮಾಡು ವವರನ್ನು ಗುರುತಿಸಿ ಸನ್ಮಾನಿಸಿದರೆ ಅದು ಮುಂದೆ ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಡಾ. ಕುಂಜ್ಹಬ್ದುಲ್ಲಾ ಅವರ ಕುರಿತು ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ, ಪದಾಧಿಕಾರಿ ಗಳಾದ ಆಕ್ಕಳತಂಡ ಎಸ್. ಮೊಯಿದು, ಮಾಜಿ ಕಾರ್ಯದರ್ಶಿ ಪುದಿಯತ್ತಂಡ ಹೆಚ್. ಷಂಶುದ್ದೀನ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ (ಬೇಗೂರು), ಹಿರಿಯ ನಿರ್ದೇಶಕ ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಎ. ಅಬ್ದುಲ್ಲಾ ಹಾಜಿ (ವೀರಾಜಪೇಟೆ), ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ (ಕೊಟ್ಟಮುಡಿ), ಪದಾಧಿಕಾರಿಗಳು ಇದ್ದರು.