ನ. 12: ದೇಶದಲ್ಲಿ ಕರಿಮೆಣಸು ಬೆಳೆಗಾರರಿಗೆ ಪ್ರಯೋಜನಕಾರಿಯಾಗುವಂತೆ ಕೇಂದ್ರ ನೆರವು ಒದಗಿಸಲು ಕೇಂದ್ರ ಸದಾ ಸಿದ್ಧವಿದೆ ಎಂದ ಅವರು, ಕರಿಮೆಣಸು ವಿಚಾರದಲ್ಲಿ ಸರಕಾರದ ಪ್ರಯತ್ನ ಮುಂದುವರಿಯುತ್ತಿದೆ ಎಂದರು.ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಿಯಮಾವಳಿ ರೂಪಿಸುತ್ತಿದೆ. ಇದರ ಜೊತೆಗೆ ರಾಜ್ಯ ಸರಕಾರ ಏನು ಅಗತ್ಯವಿದೆ ಎಂಬ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದರೆ ಈ ಬಗ್ಗೆ ಕೇಂದ್ರ ಸಹಕಾರ ನೀಡಲಿದೆ ಎಂದ ಅವರು, ಕುಶಾಲನಗರ ತನಕದ ರೈಲು ಮಾರ್ಗ ಯೋಜನೆ ಕಾರ್ಯ ಗತಗೊಳಿಸುವುದು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ತಮ್ಮ ಆದ್ಯತೆ ಎಂದರು. ರೈಲು ಮಾರ್ಗದಿಂದಲೂ ಬೆಳೆಗಾರರಿಗೆ ಹಲವು ಪ್ರಯೋಜನಗಳಾಗಲಿವೆ. ಮುಂದಿನ ಬಜೆಟ್‍ನಲ್ಲಿ ಈ ಬಗ್ಗೆ ಆಶಾದಾಯಕವಾದ ವಿಚಾರ ಪ್ರಕಟಗೊಳ್ಳುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.ರೈತರ ಖಾತೆಗೆ ಹಣ... ಕಾಳ ಸಂತೆ ತಡೆ...ರಸಗೊಬ್ಬರಕ್ಕೆ ಸಂಬಂಧಿಸಿದಂತೆ ರೈತರಿಗೆ ಸಹಾಯಧನ ನೇರವಾಗಿ ರೈತರ ಖಾತೆಗೆ ತಲುಪುತ್ತಿದೆ. ಆಧಾರ್ ಲಿಂಕ್, ಹೆಬ್ಬೆಟ್ಟಿನ ಮುದ್ರೆಯಿಂದ ರೈತರಿಗೆ ಇದು ನೇರವಾಗಿ ಪ್ರಯೋಜನಕ್ಕೆ ಬರುತ್ತಿದೆ ಎಂದ ಸಚಿವರು, ನೀಮ್ ಕೋಟಿಂಗ್ ಮೂಲಕ ದೇಶದಲ್ಲಿ ಗೊಬ್ಬರ ಉತ್ಪಾದನೆಯಾಗುತ್ತಿದ್ದು, ಕಾಳಸಂತೆಗೆ ಅವಕಾಶವಿಲ್ಲ. ಅಕ್ರಮ ಮಾರಾಟವನ್ನು ಯಶಸ್ವಿಯಾಗಿ ತಡೆಯಲಾಗಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 148 ಡೀಲರ್‍ಗಳ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಲಾಗಿದೆ

(ಮೊದಲ ಪುಟದಿಂದ) ಎಂದು ಅವರು ಮಾಹಿತಿಯಿತ್ತರು. ಗೊಬ್ಬರದ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಆ್ಯಪ್ ooಡಿvಚಿಡಿiಞ.ಟಿiಛಿ.iಟಿ ಮೂಲಕ ರೈತರು ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ

ಅಭಿವೃದ್ಧಿಗೆ ಒತ್ತು ನೀಡುವುದು ಎಲ್ಲರ ಕರ್ತವ್ಯ ಎಂದು ಸಾಮಾನ್ಯ ಜನ ಕೂಡ ತಿಳಿದುಕೊಂಡಿದ್ದಾರೆ ಎಂಬುದಕ್ಕೆ ಪ್ರಸ್ತುತ ನಡೆದ ಚುನಾವಣೆ ಉದಾಹರಣೆಯಾಗಿದೆ. ಬಿಜೆಪಿ ಆಡಳಿತ ಇಲ್ಲದ ಜಾಗದಲ್ಲೂ ಬಿಜೆಪಿ ಜಯಗಳಿಸಿದೆ ಎಂದ ಅವರು, ದೇಶದಲ್ಲಿ ಜನ ಭ್ರಷ್ಟಾಚಾರ ರಹಿತವಾದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಎಂದರಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರವೇ ಇಲ್ಲ. ಸಿದ್ಧರಾಮಯ್ಯ ಅವರಿಗೆ ಅವರ ಸ್ಥಾನ ಉಳಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ. ಅವರ ಹೇಳಿಕೆ ಗಮನಿಸಿದರೆ ಭ್ರಮನಿರಸರಾದಂತಿದೆ ಎಂದು ಡಿ.ವಿ.ಎಸ್. ಲೇವಡಿ ಮಾಡಿದರು.