*ಗೋಣಿಕೊಪ್ಪಲು, ನ. 12: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಕೇಂದ್ರಿಯ ನೇರ ಸಾಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಆಡು ಮರಿಗಳನ್ನು ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಒಬ್ಬ ಫಲಾನುಭವಿಗೆ ತಲಾ 5 ಆಡು ಮರಿಗಳನ್ನು ನೀಡಲಾಯಿತು. ತಿತಿಮತಿ, ಪಾಲಿಬೆಟ್ಟ, ಕಾನೂರು, ಹುದಿಕೇರಿ ಭಾಗದ ಹಾಡಿ ನಿವಾಸಿಗಳಿಗೆ ಈ ಸೌಲಭ್ಯಗಳನ್ನು ನೀಡಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಜಿಲ್ಲಾ ಸಮನ್ವಯ ಅಧಿಕಾರಿ ಶಿವಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಜಿ. ಗುರುಶಾಂತಪ್ಪ, ತಾಲೂಕು ಪಶುವೈದ್ಯಾಧಿಕಾರಿ ತಿಮ್ಮಯ್ಯ ಹಾಜರಿದ್ದರು.