ಸೋಮವಾರಪೇಟೆ,ನ.12: ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಮನೆಯ ಮೇಲೆ ಧಾಳಿ ನಡೆಸಿ ಪುಳಿಗಂಜಿ ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ನಡೆದಿದೆ.
ಕಲ್ಕಂದೂರು ಗ್ರಾಮದ ಕೆ.ಇ. ಪ್ರಸನ್ನ ಅವರ ಮನೆ ಮೇಲೆ ಧಾಳಿ ನಡೆಸಿದ ಅಬಕಾರಿ ಇಲಾಖಾಧಿಕಾರಿಗಳು ಆರೋಪಿ ಸಹಿತ 30 ಲೀಟರ್ ಪುಳಿಗಂಜಿಯನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಉಪ ಅಧೀಕ್ಷಕಿ ಚೈತ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಎ. ಮಂಜು, ಗಾರ್ಡ್‍ಗಳಾದ ಕೆ.ವಿ. ಸುಮತಿ, ಮಹದೇವ್ ಅವರುಗಳು ಭಾಗವಹಿಸಿದ್ದರು.