ಮಡಿಕೇರಿ ನ. 12: ಪ್ರವಾದಿ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಎಸ್ ವಿಂಗ್ ಎಮ್ಮೆಮ್ಮಾಡು ತಂಡ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಪ್ರಥಮ ಸ್ಥಾನವನ್ನು ಮುಂಬಯಿಯ ಡಾ. ಕೊಳ್ಚಪೆ ಗೋವಿಂದ್ ಭಟ್ ದ್ವಿತೀಯ ಸ್ಥಾನ ಬಳ್ಳಾರಿಯ ನಿಷ್ಟಿ ರುದ್ರಪ್ಪ ಹಾಗೂ ತೃತೀಯ ಸ್ಥಾನವನ್ನು ಮಂಗಳೂರಿನ ಝುಲೇಖ ಮಮ್ತಾಜ್ ಪಡೆದಿದ್ದಾರೆ. ಸಹನಾ ಕಾಂತಬೈಲ್, ಸುನಿಲ್ ಗರಗ ದಾರವಾಡ, ದುರ್ಗಾಪ್ರಸಾದ್ ಮಡಿಕೇರಿ, ತಸ್ಮಿಯಾ ಶಿವಮೊಗ್ಗ, ಮುಹಮ್ಮದ್ ರಾಫಿ ಅಯ್ಯಂಗೇರಿ, ಗುಣವತಿ ದಾನಗುಡ್ಡೆ ಬೆಳ್ತಂಗಡಿ, ಸಂದೇಶ್ ಜೋಸೆಫ್ ಸುಂಟಿಕೊಪ್ಪ, ಕೌಸಲ್ಯ ಚೆನ್ನರಾಯಪಟ್ಟಣ, ನವ್ಯಶ್ರೀ ಚೆನ್ನರಾಯಪಟ್ಟಣ, ಉನೈಸ್ ಹುಂಡಿ, ಅಬ್ದುಲ್ ಖಾದರ್, ರಹಿಮಾನ್ ಮಠ ಅವರುಗಳು ಬರೆದ ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆಯಿತು.
ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಪೈಗಂಬರರ ಸಂದೇಶಗಳು ಮತ್ತು ಪ್ರವಾದಿ (ಸ.ಅ) ಅವರ ಅತ್ಯುತ್ತಮ ಮಾದರಿ ಜೀವನ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು. ವಿಜೇತರಾದವರಿಗೆ ನಗದು ಮತ್ತು ಇ-ಸರ್ಟಿಫಿಕೇಟ್ ಹಾಗೂ ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ಕಳುಹಿಸಿ ಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಕುವೈತ್ ನಲ್ಲಿರುವ ಹುಸೈನ್ ಎರುಮಾಡ್ ಹಾಗೂ ಜಲೀಲ್ ನಿಜಾಮಿ ದುಬೈ ಅವರುಗಳು ಪ್ರಾಯೋಜಿಸಿದ್ದಾರೆ.