ಸೋಮವಾರಪೇಟೆ, ನ. 12: ದಲಿತ ಹಿತರಕ್ಷಣಾ ಒಕ್ಕೂಟದ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ನಳಿನಿ ಗಣೇಶ್ ಹಾಗೂ ಉಪಾಧ್ಯಕ್ಷ ಬಿ. ಸಂಜೀವ ಅವರುಗಳನ್ನು ಸನ್ಮಾನಿ ಸಲಾಯಿತು.

ಈ ಸಂದರ್ಭ ಹಿತರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ನಿರ್ವಾಣಪ್ಪ, ಗೌರವಾಧ್ಯಕ್ಷ ಜಯಪ್ಪ ಹಾನಗಲ್ಲು, ಪ್ರಧಾನ ಕಾರ್ಯದರ್ಶಿ ಬಿ.ಈ. ಜಯೇಂದ್ರ, ಪದಾಧಿಕಾರಿಗಳಾದ ಹೆಚ್.ಬಿ. ಜಯಮ್ಮ, ಹೆಚ್.ಬಿ. ಸೋಮಪ್ಪ, ಹೆಚ್.ಎ. ನಾಗರಾಜು, ವಸಂತ, ಕೆ.ಬಿ. ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.