ಮಡಿಕೇರಿ, ನ. 12: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳಾದ ಜನರಲ್ ಮೆಡಿಸಿನ್ 9 ಹುದ್ದೆ, ಕಮ್ಯೂನಿಟಿ ಮೆಡಿಸಿನ್ 2, ಮಕ್ಕಳ ವಿಭಾಗ 3, ಶ್ವಾಶಕೋಶ ವಿಭಾಗ 2, ಚರ್ಮ ರೋಗ ವಿಭಾಗ 1, ರೇಡಿಯಾಲಜಿ 5, ಅರವಳಿಕೆ ಶಾಸ್ತ್ರ ವಿಭಾಗ 3, ಸ್ತ್ರೀ ಮತ್ತೂ ಪ್ರಸೂತಿ ರೋಗ ವಿಭಾಗ 3, ಕೀಲು ಮತ್ತು ಮೂಳೆ ವಿಭಾಗ 4, ಕಣ್ಣಿನ ವಿಭಾಗ 1, ಕಿವಿ, ಮೂಗು ಮತ್ತು ಗಂಟಲು ವಿಭಾಗ 1 ಹುದ್ದೆ ಸೇರಿದಂತೆ ಒಟ್ಟು ಖಾಲಿ ಇರುವ 44 ಮಂದಿ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಬುಧವಾರ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೇರ ಸಂದರ್ಶನ ನಡೆಯಿತು. ಸಂದರ್ಶನದಲ್ಲಿ 108 ವೈದ್ಯರುಗಳು ನೋಂದಣಿ ಮಾಡಿಕೊಂಡು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ, ರಾಜೀವ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಹೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪಾಂಶುಪಾಲ ಡಾ. ವಿಶಾಲ್, ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲೆ ಡಾ. ದಾಕ್ಷಾಯಿನಿ, ಮಂಡ್ಯ ವೈದ್ಯಕೀಯ ವಿಜ್ಞಾನ ವಿಭಾಗದ ಡಾ. ಹರೀಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಡಾ. ನಂಜುಂಡೇಗೌಡ ಹಾಗೂ ಸಂಬಂಧಪಟ್ಟ ವಿಭಾಗ ತಜ್ಞ ವೈದ್ಯರು ಹಾಜರಿದ್ದರು.