ಕುಶಾಲನಗರ, ನ. 12: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಡಗು ಜಿಲ್ಲೆಯ ಜಿಲ್ಲಾಮಟ್ಟದ ಅಭ್ಯಾಸ ಶಿಬಿರ ಕುಶಾಲನಗರದಲ್ಲಿ ಎರಡು ದಿನಗಳ ಕಾಲ ನಡೆಯಿತು. ಶಿಬಿರಕ್ಕೆ ರಾಜೇಶ್ ಸ್ವಾಮೀಜಿ ಚಾಲನೆ ನೀಡಿದರು. ಅಭ್ಯಾಸ ಶಿಬಿರದಲ್ಲಿ ಜಿಲ್ಲೆಯ ಮೂರು ತಾಲೂಕುಗಳ ಕಾಲೇಜುಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾರ್ಯಕರ್ತರಿಗೆ ಸೈದ್ಧಾಂತಿಕ ಭೂಮಿಕೆ, ವಿಶೇಷ ಭಾಷಣ ಮುಂತಾದ ತರಗತಿಗಳನ್ನು ಪ್ರಮುಖರಾದ ಕೇಶವ ಬಂಗೇರ, ಡಾ. ರವಿ ಮಂಡ್ಯ, ಶ್ರೀನಿಧಿ ಅವರುಗಳು ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ಕುಶಾಲನಗರ ರೆಡ್‍ಕ್ರಾಸ್ ಅಧ್ಯಕ್ಷ ಎಸ್.ಕೆ. ಸತೀಶ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಭರತ್ ಮಾಚಯ್ಯ, ಸ್ವಯಂಸೇವಕ ಸಂಘದ ಪ್ರಮುಖರು ಪಾಲ್ಗೊಂಡು ಮಾತನಾಡಿದರು. ಕುಶಾಲನಗರದ ಕಾರ್ಯಕರ್ತರಿಗೆ ಅ.ಭಾ.ವಿ.ಪ.ದ ಕಾರ್ಯಕಾರಿಣಿ ಜವಾಬ್ದಾರಿಗಳನ್ನು ಘೋಷಿಸಲಾಯಿತು. ಕುಶಾಲನಗರದ ಕಾರ್ಯದರ್ಶಿಯಾಗಿ ರಾಜೇಶ್, ಸಹ ಕಾರ್ಯದರ್ಶಿಯಾಗಿ ತನ್ಮಯ್, ರಕ್ಷಿತ್, ಅಧ್ಯಯನ ವ್ರತ್ತ ಪ್ರಮುಖ್ -ಪ್ರದೀಪ್, ಸಾಮಾಜಿಕ ಜಾಲತಾಣ ಪ್ರಮುಖ್- ಪೂಜಿತ್, ಹೋರಾಟ ಪ್ರಮುಖ್- ಸ್ವಾಮಿ, ಕಾರ್ಯಕಾರಿಣಿ ಸದಸ್ಯರಾಗಿ ಪ್ರವೀಣ್, ಅಭಿಷೇಕ್, ಸಾಗರ್, ಕೀರ್ತನ್, ಸುಭಾಷ್, ತಾಲೂಕು ಸಂಚಾಲಕರಾಗಿ ಮಂದಾರ್ ಅವರುಗಳ ಆಯ್ಕೆಮಾಡಲಾಯಿತು. ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವೀರೇಶ್ ಅಜ್ಜಣ್ಣನವರ್ ಹಾಗೂ ಇತರರು ಇದ್ದರು.