ಗೋಣಿಕೊಪ್ಪಲು, ನ.10: ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಅರುಣ್ ಬಾಸ್ಕರ್ ರೂಪಾಯಿ ಮೂರು ಸಾವಿರ ನಗದನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಎ.ಸಿ.ಬಿ ಅಧಿಕಾರಿಗಳು ದಾಳಿನಡೆಸಿ ಅರುಣ್ ಬಾಸ್ಕರ್ ಅವರನ್ನು ದಸ್ತಗಿರಿ ಮಾಡಿದ್ದು. ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. (ಮೊದಲ ಪುಟದಿಂದ) ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಟರ್‍ಮ್ಯಾನ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ರಾಘವ ಎಂಬವರ ನಿವೃತ್ತಿ ಕಡತ ಅಂತಿಮಗೊಳಿಸಲು ಭಾಸ್ಕರ್ ಐದು ರೂಪಾಯಿ ಲಂಚವನ್ನು ಬೇಡಿಕೆಯಾಗಿ ಇಟ್ಟಿದ್ದಾಗಿ ಹೇಳಲಾಗಿದೆ.

ಅರುಣ್ ಬಾಸ್ಕರ್ ಅದರ ಮುಂಗಡ ಮೊತ್ತ ಮೂರು ಸಾವಿರ ಹಣವನ್ನು ನಿವೃತ್ತ ನೌಕರನಿಂದ ಪಡೆದುಕೊಂಡಿದ್ದು, ಇನ್ನೂ ಎರಡು ಸಾವಿರ ನೀಡಲು ಸಾಧ್ಯವಿಲ್ಲದೆ, ರೂ. 1,500 ಹಣ ನೀಡುವದಾಗಿ ರಾಘವ ಭಿನ್ನವಿಸಿಕೊಂಡಿದ್ದು, ಅದರಂತೆ ಇಂದು 1,500 ಲಂಚ ಪಡೆಯುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆ ಎ.ಸಿ.ಬಿ ಪೆÇಲೀಸರು ಬಲೆ ಬೀಸಿ ಅರುಣ್ ಬಾಸ್ಕರ್ ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಸಿಬಿ ದಕ್ಷಿಣ ವಲಯ ಮೈಸೂರಿನ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಣ್ಣೇಕರ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ಪೆÇಲೀಸ್ ಇನ್ಸ್‍ಪೆಕ್ಟರ್ ಬಿ.ಎಸ್ ಶ್ರೀಧರ್ , ಶಿಲ್ಪ ಕೆ. ಹಾಗೂ ಸಿಬ್ಬಂದಿಗಳು ದಾಳಿಯ ಸಂದರ್ಭ ಹಾಜರಿದ್ದರು. ಆರೋಪಿ ಅರುಣ್ ಭಾಸ್ಕರ್ ಕಳೆದ ಹತ್ತು ವರ್ಷಗಳಿಂದ ಕಚೇರಿಯಲ್ಲಿ ದ್ವಿತೀಯ ದರ್ಜೆಯ ನೌಕರನಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಪ್ರಥಮ ದರ್ಜೆಗೆ ಬಡ್ತಿ ಹೊಂದಿದ್ದರು.

- ಹೆಚ್.ಕೆ.ಜಗದೀಶ್