ನಾಪೆÇೀಕ್ಲು, ನ. 11: ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೊಳಕೇರಿ ಗ್ರಾಮದ ಬೆಳೆಗಾರರಾದ ಕೇಟೋಳಿರ ರೆಮ್ಮಿ, ನೆಡುಮಂಡ ಕೃತಿ, ಮುದ್ದಪ್ಪ ಮತ್ತು ಬಿಜೆಪಿ ಕಾರ್ಯಕರ್ತ ಅಪ್ಪನೆರವಂಡ ಕಿರಣ್ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮುದ್ರಾ ಯೋಜನೆ ಯಡಿಯಲ್ಲಿ ಶೇ. 13 ರಷ್ಟು ಬಡ್ಡಿ ದರದಲ್ಲಿ ರೂ. 1 ಲಕ್ಷ ನಾವು ಸಾಲವಾಗಿ ಪಡೆದಿದ್ದೇವೆ. ಕಳೆದ 4 ವರ್ಷಗಳಿಂದ ವಾರ್ಷಿಕ ಬಡ್ಡಿಯನ್ನು ಪಾವತಿಸಿ ಸಾಲವನ್ನು ನವೀಕರಿಸುತ್ತಾ ಬಂದಿದ್ದೇವೆ. ಆದರೆ, ಈ ಬಾರಿ ಬಡ್ಡಿ ಪಾವತಿಸಿ ಸಾಲ ನವೀಕರಿಸಲು ನಾಪೆÇೀಕ್ಲು ಡಿಸಿಸಿ ಬ್ಯಾಂಕಿಗೆ ತೆರಳಿದ ಸಂದರ್ಭ ಬಡ್ಡಿ ಮಾತ್ರ ಪಾವತಿಸಿದರೆ ಸಾಲದು ಅಸಲಿನ ರೂ. 20 ಸಾವಿರ ಪಾವತಿಸಬೇಕೆಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದೇಶಿಸಿದ್ದಾರೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಷರತ್ತುಗಳು ಸಾಲ ಪಡೆಯುವ ಸಂದರ್ಭದಲ್ಲಿ ಇರಲಿಲ್ಲ. ಈಗ ಏಕಾಏಕಿ ಗ್ರಾಹಕರ ಮೇಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹೊಸ ಕಾನೂನು ಏರುತ್ತಿರುವದು ಸರಿಯಲ್ಲ ಎಂದು ಅವರು ಹೇಳಿದರು.

ಕೊರೊನಾ ಕಾರಣದಿಂದ ರೈತಾಪಿ ವರ್ಗ, ಜನಸಾಮಾನ್ಯರು ಹೆಚ್ಚಿನ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದುದರಿಂದ ಗ್ರಾಹಕರಿಗೆ ಅನುಕೂಲವಾಗುವಂತೆ ಬಡ್ಡಿ ಮಾತ್ರ ಪಾವತಿಸಿ ಸಾಲ ನವೀಕರಣ ಮಾಡುವಂತೆ ಅನುಕೂಲ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.