ವೀರಾಜಪೇಟೆ ವರದಿ, ನ. 10: ಕಷ್ಟ ಪಡದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 17 ರಿಂದ 21 ವರ್ಷದ ವಯಸ್ಸಿನ ನಡುವಿನ ನಾಲ್ಕು ವರ್ಷ ಗಳು ದೇವರು ನಾವು ಪ್ರಜ್ಞಾವಂತ ನಾಗರಿಕರಾಗಲು ನೀಡಿರುವ ಅಮೂಲ್ಯ ಅವಕಾಶ, ಅದನ್ನು ಬಳಸಿಕೊಳ್ಳಿ. ಛಲದಿಂದ ಸೇನೆಗೆ ಸೇರಿ ಎಂದು ಶಿಮ್ಲಾದ ಗೋರ್ಕಾ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಕರ್ನಲ್ ಚಿಕ್ಕಂಡ ನಂದಕುಮಾರ್ ಅವರು ಹೇಳಿದರು.

ವೀರಾಜಪೇಟೆಯ ಕೊಡಗು ಎಜ್ಯುಕೇಶನ್ ಹಾಗೂ ಸೋಷಿಯಲ್ ಸರ್ವಿಸ್ ಟ್ರಸ್ಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇನೆಗೆ ಸೇರಬಯಸುವ 17 ರಿಂದ 21ವರ್ಷದ ಯುವಕರಿಗೆ ಮಾರ್ಗದರ್ಶನ ನೀಡಿದರು.

37 ಅooಡಿg (ಒeಜium) ರೆಜಿಮೆಂಟ್‍ಗೆ ಡಿಸೆಂಬರ್ 7, 8 ರಂದು ಹೈದರಾಬಾದ್‍ನಲ್ಲಿ ನಡೆಯುವ ಸ್ಪೋಟ್ರ್ಸ್ ಕೋಟಾ ಸೇನಾ ರ್ಯಾಲಿಗೆ ಸೇರ ಬಯಸುವವರು ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಪ್ರಮಾಣ ಪತ್ರ ಪಡೆದಿರುವ ಜಿಲ್ಲೆಯ ಯುವಕರು ಭಾಗವಹಿಸ ಬಹುದಾಗಿದ್ದು ಈ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಟ್ರಸ್ಟ್‍ನ ಅಧ್ಯಕ್ಷ ಮಂದಪಂಡ ಸದಾ ಚಂಗಪ್ಪ, ಕಾರ್ಯದರ್ಶಿ ಮಾಚಂಡ ಗಣೇಶ್, ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ವಾಂಚೀರ ನಾಣಯ್ಯ, ತ್ರಿವೇಣಿ ಶಾಲೆಯ ವ್ಯವಸ್ಥಾಪಕ ಆಪಾಡಂಡ ಕಾರ್ಯಪ್ಪ ಹಾಜರಿದ್ದರು. ಕಾರ್ಯಾಗಾರದಲ್ಲಿ 107 ಯುವಕರು ಭಾಗವಹಿಸಿದ್ದರು.