*ಗೋಣಿಕೊಪ್ಪಲು, ನ. 11: ಕೊಡಗು ಕೈವಾರ ತಾತಯ್ಯ ಉತ್ಸವ ಸಮಿತಿ ಅಧ್ಯಕ್ಷರಾಗಿ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷ ವೀರಾಜಪೇಟೆಯ ಎಸ್.ಕೆ. ಯತಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯದ ಎಲ್ಲೆಡೆ ವರ್ಷಂಪ್ರತಿ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತ್ಯೋತ್ಸವ ನಡೆಯುತ್ತಿದ್ದರೂ, ಕೊಡಗಿನಲ್ಲಿ ಈವರೆಗೆ ನಡೆದಿಲ್ಲ. ಈ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಕೈವಾರ ತಾತಯ್ಯ ಜಯಂತ್ಯೋತ್ಸವವನ್ನು ಆಚರಿಸಲಾಗುವದು ಎಂದು ಯತಿರಾಜ್ ತಿಳಿಸಿದ್ದಾರೆ.

ಕೋವಿಡ್ 19ರ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದಲ್ಲಿ ಕೈವಾರ ತಾತಯ್ಯ ಜಯಂತಿ ಈ ಬಾರಿ ಆಚರಿಸುತ್ತಿಲ್ಲ. ವರ್ಷಂಕ್ಕೊಂದು ಗ್ರಾಮದಲ್ಲಿ ಸದ್ಗುರು ಯೋಗಿ ನಾರಾಯಣ ಯತೀಂದ್ರರ ಜಯಂತ್ಯೋತ್ಸವ ಆಚರಿಸಲು ತೀರ್ಮಾನಿಸಲಿದ್ದು, ಮೊದಲ ಕಾರ್ಯಕ್ರಮವನ್ನು ಪೆÇನ್ನಂಪೇಟೆಯಿಂದ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ಪೆÇನ್ನಂಪೇಟೆ ನಗರದಲ್ಲಿ ಸಾಧನೆ ಮಾಡಿದ ಓರ್ವ ಬಲಿಜ ವ್ಯಕ್ತಿಯ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲಾಗುವದು. ಕೈವಾರ ಬಳೆಗಾರ ನಾರಾಯಣಪ್ಪ ಯತೀಂದ್ರರ ಪೂಜೆ, ಮಲ್ಲಾರ ಪೂಜೆಯೊಂದಿಗೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗುವದು. ಕೋವಿಡ್ 19ರ ಹಿನ್ನೆಲೆ ಪೆÇನ್ನಂಪೇಟೆ ವ್ಯಾಪ್ತಿಯ ಬಲಿಜ ಜನಾಂಗ ಹಾಗೂ ಕೊಡಗು ಜಿಲ್ಲಾ ಬಲಿಜ ಸಮಾಜ ಪದಾಧಿಕಾರಿಗಳು, ರಾಜ್ಯ ಬಲಿಜ ಸಂಘದ ಪದಾಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮುಂದಿನ ತಿಂಗಳು ಕಾಲಜ್ಞಾನಿ ತಾತಯ್ಯ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದೇ ಸಂದರ್ಭ ಕೊಡಗು ಬಲಿಜ ಸಮಾಜಕ್ಕೆ ಪೂರಕ ಸಹಕಾರ ನೀಡಿ, ಇತ್ತೀಚೆಗೆ ನಿಧನರಾದ ಬೆಕ್ಕೆಸೊಡ್ಲೂರು ಗ್ರಾಮದ ಟಿ.ಎ. ಪಾಪಯ್ಯ ನಾಯ್ಡು ಮತ್ತು ಕುಶಾಲನಗರದ ಟಿ.ಕೆ. ಲಲಿತ (ಗುಣ) ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕೊಡಗು ಬಲಿಜ ಸಮಾಜದ ಸಹಯೋಗದೊಂದಿಗೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಮಾಹಿತಿ ನೀಡಿದ್ದಾರೆ.