ಮಡಿಕೇರಿ, ನ. 10: 2015 ರ ನವೆಂಬರ್ 10 ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದ ಗಲಭೆಯಲ್ಲಿ ಮರಣ ಹೊಂದಿದ ಅಂದಿನ ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಅವರ ಗೌರವಾರ್ಥ ಶಾಂತಿ ಪೂಜೆ ಇಂದು ಬೆಳಗ್ಗೆ ನಗರದ ಓಂಕಾರೇಶ್ವರ ದೇವಾಲಯದಲ್ಲಿ ನೆರವೇರಿತು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ಕೆ. ಹೆಚ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಬಜರಂಗದಳದ ಜಿಲ್ಲಾ ಸೇವಾ ಪ್ರಮುಖ ಪಿ. ಜಿ. ಕಮಲ್, ವಿದ್ಯಾರ್ಥಿ ಪ್ರಮುಖ ವಿನಯ್ ಕುಮಾರ್, ತಾಲೂಕು ಸಂಯೋಜಕ ಮನು ರೈ, ತಾಲೂಕು ಗೋ ರಕ್ಷಾ ಪ್ರಮುಖ ನಂದಕುಮಾರ್ ಬಿ.ಎಸ್., ನಗರ ಸಹ ಸಂಯೋಜಕಕರಾದ ಚರಣ್, ದುರ್ಗೇಶ್, ಭಾ.ಜ.ಪ ದ ಮನು ಮಂಜುನಾಥ್, ಅರುಣ್ ಕುಮಾರ್, ಉಮೇಶ್ ಸುಬ್ರಮಣಿ, ಬಿ. ಕೆ. ಜಗದೀಶ್, ಸುಕುಮಾರ್ ಅರುಣ್ ಶೆಟ್ಟಿ, ನವೀನ್ ಪೂಜಾರಿ, ಪೂಣಚ್ಚ , ಹಿಂ. ಜಾ. ವೇ ಯ ಅಜಿತ್ ಕುಕ್ಕೇರ, ಮಹೇಶ್. ಸಂಘದ ವಿವಿಧ ಕ್ಷೇತ್ರಗಳ ಕಾರ್ಯಕರ್ತರು, ಕುಟ್ಟಪ್ಪ ಆತ್ಮಕ್ಕೆ ಶಾಂತಿ ಕೋರಿದರು.

ವೀರಾಜಪೇಟೆ : ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲಿ ಮರಣ ಹೊಂದಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಅವರ ಹೆಸರಲ್ಲಿ ಹಿಂದೂ ಸಂಘಟನೆಗಳಿಂದ ಶಾಂತಿ ಪೂಜೆ ಸಲ್ಲಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವೀರಾಜಪೇಟೆ ತಾಲೂಕು ಸಂಯುಕ್ತ ಆಶ್ರಯದಲ್ಲಿ ನಗರದ ಮಾಹಾಗಣಪತಿ ದೇವಾಲಯದಲ್ಲಿ ಹುತಾತ್ಮ ಕುಟ್ಟಪ್ಪ ಅವರನ್ನು ನೆನೆದು ಶಾಂತಿ ಪೂಜೆ ಸಲ್ಲಿಸಲಾಯಿತು.

ವಿಶ್ವ ಹಿಂದೂ ಪರಿಷತ್‍ನ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ, ತಾಲೂಕು ಕಾರ್ಯದÀರ್ಶಿ ಬಿ. ಎಂ. ಕುಮಾರ್, ಭಜರಂಗದಳ ತಾಲೂಕು ಸಂಚಾಲಕ ವಿವೇಕ್ ರೈ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಪ್ರಮುಖ್ ಬಿ.ವಿ. ಹೇಮಂತ್, ವಿಶ್ವ ಹಿಂದೂ ಪರಿಷತ್‍ನ ನಗರ ಅಧ್ಯಕ್ಷ ಪೊನ್ನಪ್ಪ ರೈ, ಭಜರಂಗದಳ ನಗರ ಸಂಚಾಲಕ ದಿನೇಶ್ ನಾಯರ್, ಭಾ.ಜ.ಪ. ನಗರ ಅಧ್ಯಕ್ಷ ಟಿ.ಪಿ ಕೃಷ್ಣ, ಹಿಂದೂ ಜಾಗರಣ ವೇದಿಕೆಯ ರತ್ನಕರ ಮತ್ತು ಸುನಿಲ್ ಹಾಜರಿದ್ದರು.