ಮುಳ್ಳೂರು, ನ. 10: ಸಮೀಪದ ಅಂಕನಹಳ್ಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮದ ದೇವಿರಮ್ಮ ಬೆಟ್ಟದಲ್ಲಿ ಕಳೆದ 35 ವರ್ಷಗಳ ಹಿಂದೆ ಶ್ರೀ ದೇವಿರಮ್ಮ ದೇವಿಯ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯ ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು. ದೇವಾಲಯ ಸಮಿತಿಯಿಂದ ಸ್ಥಗಿತಗೊಂಡಿದ್ದ ದೇವಿಯ ಮೂರ್ತಿ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ದೇವಿರಮ್ಮ ದೇವಿಗೆ ಪೂಜಾ ವಿಧಾನ ಕೈಂಕರ್ಯವನ್ನು ಇಂದು ನೆರವೇರಿಸಲಾಯಿತು. ಬೆಟ್ಟದಳ್ಳಿ ಗ್ರಾಮದಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಅರ್ಚಕರು ಬೆಳಗ್ಗೆಯಿಂದ ಅರ್ಚಕರ ತಂಡ ಶ್ರೀ ದೇವಿರಮ್ಮ ದೇವಿಯ ಮೂರ್ತಿಗೆ ವಿಶೇಷ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ದೇವಿಯ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿದರು. ಬಳಿಕ ಅರ್ಚಕರು ಮತ್ತು ಭಕ್ತಾದಿಗಳು ಶ್ರೀ ದೇವಿರಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಬೆಟ್ಟದಳ್ಳಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಬಿ. ಧರ್ಮಪ್ಪ, ಬಿ.ಕೆ. ಮೂರ್ತಿ, ಸುನೀಲ್, ಬಿ.ವಿ. ದಿನೇಶ್, ರೇಣು, ಸಂಪತ್, ಪಾಪಣ್ಣ ಮುಂತಾದವರು ಪಾಲ್ಗೊಂಡಿದ್ದರು. -ಭಾಸ್ಕರ್ ಮುಳ್ಳೂರು