ಸುಂಟಿಕೊಪ್ಪ, ನ. 11: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗರಗಂದೂರು ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಮಂಜುಶ್ರೀ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಾಗಾರ ವನ್ನು ನಡೆಸಲಾಯಿತು.

ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ವೈ ಉದ್ಘಾಟಿಸಿ; ಯುವ ಜನಾಂಗದಲ್ಲಿ ಆಧುನಿಕ ಶೈಲಿಯ ಆಹಾರ ಪದ್ಧತಿಯಿಂದ ಅಪೌಷ್ಟಿಕತೆ ಹೆಚ್ಚಾಗಿ ಕಂಡು ಬರುತ್ತಿದೆ.

ಹಿರಿಯರು ಬಳಕೆಗೊಳಿಸುತ್ತಿದ್ದ ಆಹಾರ ಪದ್ಧತಿಯನ್ನು ನಿರ್ಲಕ್ಷಿಸಿ, ಆಧುನಿಕ ಬದುಕಿನ ಕಡೆಗೆ ಮಾರು ಹೋಗುತ್ತಿರುವ ಯುವ ಜನಾಂಗ ಆಧುನಿಕ ಆಹಾರ ಪದಾರ್ಥಗಳಿಗೆ ಒಲವು ತೋರುತ್ತಿದ್ದು, ಇದರಿಂದ ವಿವಿಧ ರೋಗ ರುಜಿನ ಬಲಹೀನತೆ ಕಂಡು ಬರುತ್ತಿದೆ.

ಪೋಷಕರು ಮಕ್ಕಳ ದೇಹದ ಪೌಷ್ಟಿಕತೆಯನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು.

ಯೋಜನೆಯಲ್ಲಿ ಸಂಘದ ಸದಸ್ಯರಿಗೆ ದ್ಯೆಯೋದ್ಧೇಶ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹತ್ತು ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕರ್ತೆ ಬಿ.ಡಿ.ಗ್ರೀಷ್ಮ ಮಾತನಾಡಿ ಮನೆಯಲ್ಲಿ ತಯಾರಿಸಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ಕಾಳುಗಳು, ಕಾಯಿ, ಸೊಪ್ಪುಗಳನ್ನು, ಹಾಲು, ಮೊಟ್ಟೆ, ವಿಟಮಿನ್ ಉಪಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಪೌಷ್ಟಿಕತೆ ಹೆಚ್ಚಾಗುತ್ತದೆ; ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ ಇದರಿಂದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು.

ವೇದಿಕೆಯಲ್ಲಿ ತಾಲೂಕಿನ ಸಮನ್ವಯ ಅಧಿಕಾರಿ ಪದ್ಮ, ಸುಂಟಿಕೊಪ್ಪ ವಲಯ ಮೇಲ್ವಿಚಾರಕಿ ಪುಷ್ಪಲತ, ಗರಗಂದೂರು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ಪುಷ್ಪ, ನವ ಜೀವನ ಸಮಿತಿಯ ಸಂಯೋಜಕ ಮಂಜುನಾಥ, ರಮೇಶ್, ಸೇವಾಪ್ರತಿನಿಧಿ ಕುಸುಮ ಮತ್ತಿತರರು ಇದ್ದರು.

ಮಕ್ಕಳು ಮತ್ತು ಸಂಘದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮವು ನೆರೆದಿದ್ದ ಜನತೆಯ ಮನತಣಿಸಿದ್ದವು.