ವೀರಾಜಪೇಟೆ, ನ. 10: ಜಿಲ್ಲೆಯ ಗ್ರಾಮೀಣ ಪ್ರದೇಶದ ರಸ್ತೆಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಹೇಳಿದರು.

ಕೆದಮುಳ್ಳೂರು ಗ್ರಾಮದ ಮಹಾದೇರಪ್ಪ ದೇವಾಲಯಕ್ಕೆ ರೂ, 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪೌಳಿ ಹಾಗೂ 5 ಲಕ್ಷ ವೆಚ್ಚದಲ್ಲಿ ಮಾಳೇಟಿರ ಕುಟುಂಬದ ಕೈಮಡಕ್ಕೆ ತೆರಳುವ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಕುಟುಂಬದ ಕೈಮಡ [ಗುರುಮಠ]ದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವೀರಾಜಪೇಟೆ, ನ. 10: ಜಿಲ್ಲೆಯ ಗ್ರಾಮೀಣ ಪ್ರದೇಶದ ರಸ್ತೆಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಹೇಳಿದರು.

ಕೆದಮುಳ್ಳೂರು ಗ್ರಾಮದ ಮಹಾದೇರಪ್ಪ ದೇವಾಲಯಕ್ಕೆ ರೂ, 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪೌಳಿ ಹಾಗೂ 5 ಲಕ್ಷ ವೆಚ್ಚದಲ್ಲಿ ಮಾಳೇಟಿರ ಕುಟುಂಬದ ಕೈಮಡಕ್ಕೆ ತೆರಳುವ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಕುಟುಂಬದ ಕೈಮಡ [ಗುರುಮಠ]ದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮರೆತು ಗ್ರಾಮಸ್ಥರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.

ಇದೇ ಸಂದರ್ಭ ವೀಣಾ ಅಚ್ಚಯ್ಯ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಇವರುಗಳನ್ನು ಮಾಳೇಟಿರ ಕುಟುಂಬದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯನ್ನುದ್ದೇಶಿಸಿ ಪ್ರಶಾಂತ್ ಉತ್ತಪ್ಪ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕುಟುಂಬದ ಹಿರಿಯರಾದ ಮಾಳೇಟಿರ ಎಂ. ಗಣಪತಿ ವಹಿಸಿದ್ದರು. ವೇದಿಕೆಯಲ್ಲಿ ಕಾಶಿ ಕುಂಞಪ್ಪ, ವಿಜಯ್ ಮಂದಣ್ಣ, ರಾಜೀವ್ ಕಾಳಪ್ಪ, ಸಾಬು, ಅಕ್ಕವ್ವ ಬೇಬಿ, ರಾಣಿ ಗಂಗಮ್ಮ ಹಾಗೂ ಕೊಡವ ಮಕ್ಕಡ ಕೂಟದ ಬೊಳ್ಳಜಿರ ಅಯ್ಯಪ್ಪ ಇತರರು ಉಪಸ್ಥಿತರಿದ್ದರು.