ಮಡಿಕೇರಿ, ನ. 9: ಭಾರತೀಯ ಜನತಾ ಪಕ್ಷ ಮಡಿಕೇರಿ ತಾಲೂಕು ಗ್ರಾಮಾಂತರ ಯುವಮೋರ್ಚಾದ ವತಿಯಿಂದ ವ್ಯಸನ ಮುಕ್ತ - ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣಕ್ಕಾಗಿ ‘ಡ್ರಗ್ಸ್ ಮುಕ್ತ ಭಾರತ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಡ್ರಗ್ಸ್, ಮದ್ಯಪಾನ, ಧೂಮಪಾನ ಹಾಗೂ ಇದರಿಂದ ಆಗುವ ದುಷ್ಪರಿಣಾಮಗಳು ಮತ್ತು ಕಾನೂನು ಅರಿವನ್ನು ವಿದ್ಯಾರ್ಥಿ, ಯುವ ಜನಾಂಗ ಸೇರಿದಂತೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಪೆರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತಾ. 10ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಡಾ.ಪೂನಂ ಮೋಂಟಡ್ಕ- ಸಹಾಯಕ ಪ್ರಾಧ್ಯಾಪಕರು, ಮನೋವೈದ್ಯ ಶಾಸ್ತ್ರ ವಿಭಾಗ, ಕೆ.ವಿ.ಜಿ. ಮೆಡಿಕಲ್ ಕಾಲೇಜು ಸುಳ್ಯ ಮತ್ತು ಬಾರಿಕೆ ದಿನೇಶ್ ಕುಮಾರ್- ಕೊಡಗು ಡಿವೈಎಸ್ಪಿ ಭಾಗವಹಿಸಲಿದ್ದಾರೆ.