ನಾಪೆÇೀಕ್ಲು, ನ. 8: ಕೂಲಿ ಕಾರ್ಮಿಕ ಸಮಸ್ಯೆ, ಹೆಚ್ಚಿದ ರಸಗೊಬ್ಬರ ಬೆಲೆ, ಹೆಚ್ಚಾದ ಕೂಲಿ, ಮತ್ತಿತರ ಸಮಸ್ಯೆಗಳಿಂದ ಕಂಗಾಲಾದ ಅಡಿಕೆ ಬೆಳೆಗಾರರಿಗೆ ಅಕಾಲಿಕ ಮಳೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯನ್ನು ಅಂತರ ನಾಪೆÇೀಕ್ಲು, ನ. 8: ಕೂಲಿ ಕಾರ್ಮಿಕ ಸಮಸ್ಯೆ, ಹೆಚ್ಚಿದ ರಸಗೊಬ್ಬರ ಬೆಲೆ, ಹೆಚ್ಚಾದ ಕೂಲಿ, ಮತ್ತಿತರ ಸಮಸ್ಯೆಗಳಿಂದ ಕಂಗಾಲಾದ ಅಡಿಕೆ ಬೆಳೆಗಾರರಿಗೆ ಅಕಾಲಿಕ ಮಳೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯನ್ನು ಅಂತರ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೊಳೆರೋಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಅಡಿಕೆ ಬೆಳೆ ಬೆಳೆದವರು ಕೊಳೆರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿ ಫಸಲು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಆದರೆ, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಅಡಿಕೆ ಫಸಲು ಸಂಪೂರ್ಣ ಕೊಳೆ ರೋಗಕ್ಕೆ ತುತ್ತಾಗಿ ರೈತರು ಕಂಗಾಲಾಗಿದ್ದಾರೆ. ರೋಗ ನಿರೋಧಕ ಸಿಂಪಡಿಸಿದವರ ಫಸಲೂ ಕೂಡ ನೆಲಕಚ್ಚಿದೆ. ಬಹುತೇಕ ಅಡಿಕೆ ಫಸಲು ಮರದ ಗೊನೆಯಲ್ಲಿಯೇ ಕೊಳೆತು ಒಣಗಿರುವದು ಕಂಡುಬರುತ್ತಿದೆ.
ಮಳೆಯ ಕಾರಣದಿಂದ ಈಗ 3ನೇ ಬಾರಿಗೆ ಕೊಳೆರೋಗ ಕಂಡು ಬಂದಿದ್ದು, ಅಳಿದುಳಿದ ಮರಗಳ ಫಸಲು ಕೂಡ ನೆಲಕಚ್ಚುತ್ತಿವೆ. ಪ್ರಸ್ತುತ ವರ್ಷ ಅಡಿಕೆಗೆ ಉತ್ತಮ ಧಾರಣೆಯಿದೆ ಎಂದು ತಿಳಿದು ಬಂದಿದೆ. ಆದರೆ, ಫಸಲು ಇಲ್ಲದ ಕಾರಣ ರೈತರಿಗೆ ನಿರಾಶೆಯಾಗಿದೆ.
-ಪಿ.ವಿ. ಪ್ರಭಾಕರ್