*ಸಿದ್ದಾಪುರ, ನ. 7: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡು ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಕೋ ಮತ್ತು ಸತ್ಯ ನಾರಾಯಣ ಎಂಬವರ ಮನೆಯ ಬಳಿ ರಸ್ತೆ ಹೊಂಡ, ಗುಂಡಿ ಗಳಾಗಿದ್ದು, ಜೀವನ್ ಹಾಗೂ ಪಿ.ಎಂ. ತಮ್ಮಯ್ಯ ಅವರುಗಳ ಮನೆ ದಾರಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳಿದ್ದರೂ ಕಳೆದ ಆರು ವರ್ಷಗಳಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ತಕ್ಷಣ ಶಾಸಕರು ಈ ಬಗ್ಗೆ ಆಸಕ್ತಿ ತೋರಬೇಕೆಂದು ಸ್ಥಳೀಯರಾದ ಜಾಲಿ ತಮ್ಮಯ್ಯ, ವಿಜು ಅಪ್ಪಣ್ಣ, ಚಂಗಪ್ಪ, ಡಿ.ಕೆ. ಕಿಶೋರ್ ಮತ್ತಿತರರು ಒತ್ತಾಯಿಸಿದ್ದಾರೆ.