ಮಡಿಕೇರಿ, ನ. 8: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಕೊಡಗಿನವರಾದ ವಾಟೇರಿರ ಪಿ. ಕಾರ್ಯಪ್ಪ ಅವರು ಇದೀಗ ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)ಯಾಗಿ ನೇಮಕಗೊಂಡಿದ್ದಾರೆ. ಇವರು ಸುಮಾರು 25 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿದ್ದು, ಈ ಹಿಂದೆ ಸೋಮವಾರಪೇಟೆ ವಿಭಾಗದಲ್ಲಿ ವಲಯ ಅರಣ್ಯಾಧಿಕಾರಿಯೂ ಆಗಿದ್ದರು.