ಸೋಮವಾರಪೇಟೆ, ನ. 8: ಸಮೀಪದ ಶಾಂತಳ್ಳಿ ವ್ಯಾಪ್ತಿಯ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಅಲ್ಲಿನ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೌತಿ ಖಾತೆ ಆಂದೋಲನದಲ್ಲಿ 11 ಮಂದಿ ಅರ್ಜಿ ಸಲ್ಲಿಸಿದರು.
ಆಂದೋಲನದಲ್ಲಿ ಭಾಗವಹಿಸಿದ್ದ ಸುಮಾರು 60ಕ್ಕೂ ಅಧಿಕ ಮಂದಿಗೆ ಪೌತಿ-ವಾರಸಾ ಖಾತೆ ಬದಲಾವಣೆಗೆ ಸಲ್ಲಿಸಬೇಕಾದ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ-ವಾರಸಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದೇ ಇರುವದರಿಂದ ಅಂತಹ ಜಮೀನುಗಳ ಸ್ವಾಧೀನವಿದ್ದರೂ ಸಹ ಸರ್ಕಾರದ ಯಾವೊಂದೂ ಸೌಲಭ್ಯ, ಸಾಲ, ಪರಿಹಾರ, ವಿಮೆಗಳನ್ನು ಪಡೆಯಲು ಸಾಧ್ಯವಾಗುವದಿಲ್ಲ.
ಈ ಹಿನ್ನೆಲೆ ಖಾತೆ ಬದಲಾವಣೆಯ ಪ್ರಕ್ರಿಯೆಯನ್ನು ಸರ್ಕಾರ ಸರಳೀಕರಣಗೊಳಿಸಿದ್ದು, ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪ ತಹಶೀಲ್ದಾರ್ ಕೆ.ಎಸ್. ಧನರಾಜ್ ತಿಳಿಸಿದರು.
ಈ ಸಂದರ್ಭ ಕಂದಾಯ ಪರಿವೀಕ್ಷಕ ಸಿ.ಪಿ. ಗಣೇಶ್, ಗ್ರಾಮ ಲೆಕ್ಕಾಧಿಕಾರಿ ಎಂ.ಬಿ. ಉಮೇಶ್, ತಳವಾರ, ಕರಿಬಸವರಾಜು, ಗ್ರಾಮ ಸಹಾಯಕ ಸುರೇಶ್, ಬಸವರಾಜ್, ಸಂದೀಪ್, ರಂಜನ್ ಅವರುಗಳು ಉಪಸ್ಥಿತರಿದ್ದರು.