ನವೆಂಬರ್ 9ನೇ ತಾರೀಖನ್ನು ಕಾನೂನು ಸೇವೆಗಳ ದಿನವೆಂದು ಆಚರಿಸಲಾಗುವುದು. ಕಾನೂನು ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತೀ ಮುಖ್ಯವಾದ ಒಂದು ಪ್ರಜೆಗಳ ಸೇವೆ ಅಥವಾ ಒಂದು ಅರ್ಥಬದ್ಧ ವ್ಯವಸ್ಥೆಯೇ ಆಗಿದೆ. ದೇಶದ ನಾಗರಿಕರೆಲ್ಲರಿಗೂ ನ್ಯಾಯ ಎನ್ನುವುದು ಅತೀ ಮುಖ್ಯ. ನ್ಯಾಯ ಪಾಲನೆಯಾಗಲು ಕಾನೂನು ಪಾಲನೆ ಅತೀ ಅವಶ್ಯ. ಕಾನೂನು ಎಂಬುದನ್ನು ಪ್ರಜೆಗಳೇ. ಪ್ರಜೆಗಳಿಗಾಗಿ ಮಾಡಿಕೊಂಡ ವ್ಯವಸ್ಥೆ. ಇಲ್ಲಿ ಕಾನೂನು ಪರಿಪಾಲನೆ ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆ ಸುಲಲಿತವಾಗಿ ಕಾರ್ಯನಿರ್ವಹಿಸಬೇಕಾದರೆ ಕಾನೂನಿನ ಪಾತ್ರ ಪರಿಣಾಮಕಾರಿಯಾಗಿರಬೇಕು.
ಈ ದೇಶದಲ್ಲಿ ಸಮಸ್ತ ನಾಗರಿಕರಿಗೂ ಒಂದೇ ಸಂವಿಧಾನ. ಒಂದೇ ದಂಡಸಂಹಿತೆ, ಒಂದೇ ಆದಾಯ ತೆರಿಗೆ ಮೊದಲಾದ ಸಹಸ್ರಾರು ಕಾನೂನುಗಳಿವೆ. ಇಲ್ಲಿ ನಾಗರಿಕರ ದೈನಂದಿನ ಜೀವನ ಸುಲಲಿತವಾಗಿ ಸಾಗಲು ಕಾನೂನುಗಳು ಸಹಕರಿಸುತ್ತವೆ. ಕಾನೂನುಗಳನ್ನು ಮುರಿದರೆ, ಅದು ತಪ್ಪು ಮಾಡಿದಂತೆ. ಅದಕ್ಕೆ ದಂಡನೆಗಳೂ ಇರುತ್ತವೆ. ನಮ್ಮ ಸಂವಿಧಾನವು ಎಲ್ಲಾ ವರ್ಗ, ಜಾತಿ, ಮತಗಳನ್ನು ಸಮಾನತೆಯಿಂದ ಕಾಣುತ್ತಿದೆ. ಇಲ್ಲಿ ಗೊಂದಲಗಳಿಗೆ ಅವಕಾಶವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿಗೆ ನಾವೆಲ್ಲಾ ತಲೆಬಾಗಲೇ ಬೇಕು. ಆಗ ಎಲ್ಲವೂ ಸರಾಗ.
ಕಾನೂನಿನ ಪಾಲನೆಯಲ್ಲಿ ಎಲ್ಲರೂ ಪರಿಪಾಲಿಸುವಂತಾಗಲೂ ವ್ಯವಸ್ಥೆಯಿದೆ. ಸಮಾನ ಕಾನೂನಿನಡಿಯಲ್ಲಿ ಸಮೃದ್ಧಿಯ ಜೀವನವನ್ನು ಕಾಣಬಹುದು. ಆದರೂ ಮಾನವ ಎಂದ ಮೇಲೆ ಹಲವಾರು ವ್ಯಾಜ್ಯಗಳು ಸಂಭವಿಸುತ್ತವೆ. ಇಂತಹ ವ್ಯಾಜ್ಯಗಳನ್ನು ಪರಿಹರಿಸುವ ಈ ನಿಟ್ಟಿನಲ್ಲಿ ನ್ಯಾಯಾಲಯಗಳಿವೆ. ಹೈಕೋರ್ಟ್, ಸುಪ್ರೀಂಕೋರ್ಟ್ಗಳಿವೆ. ಇವು ಎಲ್ಲರಿಗೂ ಸಮನಾಗಿ ನ್ಯಾಯವನ್ನು ನೀಡುತ್ತವೆ. ಕಾನೂನುಗಳ ರಕ್ಷಣೆಯು ಇವುಗಳ ಜವಾಬ್ದಾರಿಯಾಗಿದೆ. ಕಾನೂನುಗಳನ್ನು ಮುರಿದಲ್ಲಿ ಶಿಕ್ಷೆ ವಿಧಿಸಲು ನ್ಯಾಯಾಲಯ, ಪೊಲೀಸ್ ವ್ಯವಸ್ಥೆಗಳಿವೆ. ಕಾನೂನಿನ ವಿಶಾಲತೆಯು ದೊಡ್ಡದಿದೆ.
ಇಂದು ನಮ್ಮ ದೇಶದಲ್ಲಿ ಲಕ್ಷಾಂತರ ನ್ಯಾಯವಾದಿಗಳು ಕೋರ್ಟ್ಗಳಲ್ಲಿ ಸೇವೆ ಸಲ್ಲಿಸುತ್ತಾ ಬಡ ಮತ್ತು ಎಲ್ಲಾ ವರ್ಗದವರಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಇಲ್ಲಿ ಉಚಿತ ಕಾನೂನು ಸೇವೆಯನ್ನು ಸರಕಾರ ಹಲವು ಸಂದರ್ಭಗಳಲ್ಲಿ ನೀಡುತ್ತಿದೆ. ಉಚಿತ ಕಾನೂನು ಸೇವೆ ಪಡೆಯಲು ಹಲವು ಅವಕಾಶಗಳಿವೆ. ಇವುಗಳ ಸದುಪಯೋಗವು ಅತೀ ಮುಖ್ಯ.
ಇಂದು ಅನೇಕ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿಗಳು, ಸಿಬ್ಬಂದಿಗಳು, ಕಾನೂನು ಪಾಲನೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಪೊಲೀಸ್ ವ್ಯವಸ್ಥೆ ಇತರ ಕಾರಣರಾದವರೆಲ್ಲರನ್ನೂ ಸ್ಮರಿಸುವ ಮುಖ್ಯ ದಿನವಾಗಿದೆ. ನಾಗರಿಕರಾದ ನಾವೆಲ್ಲರೂ ಈ ದೇಶದ ಕಾನೂನುಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಕಾನೂನುಗಳ ಪಾಲನೆ ಸಮರ್ಪಕವಾಗಿ ಜನರಿಂದ ಆದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿ ಬೇರೂರಿ, ಸರಾಗವಾಗಿ ನಡೆಯುವುದು. ದೇಶ ಅಭಿವೃದ್ಧಿ ಹೊಂದುವುದು, ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುವುದು.
- ಹರೀಶ್ ಸರಳಾಯ, ಮಡಿಕೇರಿ.