ಮಡಿಕೇರಿ, ನ.7: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಇಂದು ನಡೆದಿದ್ದು, 11 ಮಂದಿ ಗೆಲುವು ಸಾಧಿಸಿದ್ದಾರೆ. ರೈತಮಿತ್ರ ಕೂಟ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಮಡಿಕೇರಿ ಸಾಮಾನ್ಯ ಕ್ಷೇತ್ರದಿಂದ ಕೋಳುಮುಡಿಯನ ಅನಂತ್‍ಕುಮಾರ್, ಸೂದನ ಈರಪ್ಪ, ಅಜ್ಜಿನಂಡ ಗೋಪಾಲಕೃಷ್ಣ, ಮಂದ್ರೀರ ಮೋಹನ್‍ದಾಸ್, ಕುಂಬುಗೌಡನ ವಿನೋದ್ ಕುಮಾರ್, ಮಹಿಳಾ ಕ್ಷೇತ್ರದಿಂದ ಪರಿವಾರ ಕವಿತಾ ಭರತ್, ಅಂಬೆಕಲ್ ಸುಶೀಲ ಕುಶಾಲಪ್ಪ ಜಯಗಳಿಸಿದ್ದಾರೆ. ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಎ.ಹೆಚ್. ಬೊಳ್ಳು, ಸೋಮವಾರಪೇಟೆ ಸಾಮಾನ್ಯ ಕ್ಷೇತ್ರದಿಂದ ಕೆ.ಕೆ. ಗೋಪಾಲ, ಪಿ.ಸಿ. ವಿಜಯಕುಮಾರ್ ಹಾಗೂ ಬೋಪಯ್ಯ ಗೆಲುವು ಸಾಧಿಸಿದ್ದಾರೆ.

ವೀರಾಜಪೇಟೆ ಸಾಮಾನ್ಯ ಕ್ಷೇತ್ರದಿಂದ ಎಸ್.ಎಸ್. ಸುರೇಶ್, ಕೋಣಿಯಂಡ ಬೋಪಣ್ಣ, ಪೆಮ್ಮಂಡ ಬೋಪಣ್ಣ, ಪ್ರವರ್ಗ ‘ಎ’ಯಿಂದ ಬಿ.ಸಿ. ಚಿನ್ನಪ್ಪ, ಪ್ರವರ್ಗ ‘ಬಿ’ಯಿಂದ ಪೇರಿಯನ ಉದಯನ ಕುಮಾರ್, ಪರಿಶಿಷ್ಟ ವರ್ಗ ಜಿಲ್ಲಾವಾರು ಅಭ್ಯರ್ಥಿ ಕುಡಿಯರ ಬೆಳ್ಯಪ್ಪ ಇವರುಗಳು ಈಗಾಗಲೇ ಅವಿರೋಧವಾಗಿ ಆಯ್ಕೆ ಆಗಿದ್ದರು.