ಪೆÇನ್ನಂಪೇಟೆ, ನ. 6: ಪೆÇನ್ನಂಪೇಟೆಯಲ್ಲಿ ‘ಕೊಡಗು ನೈಟ್ಸ್ ಬಾಸ್ಕೆಟ್ ಬಾಲ್ ಕ್ಲಬ್’ ಅವರಿಂದ ನಡೆದ ವಿ.ಕೆ. ತಿಮ್ಮಯ್ಯ ಮೆಮೋರಿಯಲ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಬಾಸ್ಕೆಟ್ ಬಾಲ್ ತರಬೇತುದಾರ ದಿ. ತಿಮ್ಮಯ್ಯ ಸ್ಮರಣಾರ್ಥ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಪೆÇನ್ನಂಪೇಟೆಯ ಸಂತ ಅಂತೋಣಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಸಲಾಯಿತು. 20ಕ್ಕೂ ಹೆಚ್ಚು ತಂಡಗಳನ್ನೊಳಗೊಂಡ ಆಟಗಾರರು ಭಾಗವಹಿಸಿದ್ದರು.

ಪಂದ್ಯಾವಳಿಯಲ್ಲಿ ಪುರುಷ ವಿಭಾಗದಲ್ಲಿ ಕೊಡಗು ವಾರಿಯರ್ಸ್ ತಂಡವು ಪ್ರಥಮ ಸ್ಥಾನ ಪಡೆದು ದ್ವಿತೀಯ ಸ್ಥಾನವನ್ನು ಸಿಸಿವಿ ತಂಡ ಪಡೆದಿದ್ದು, ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರೈಲ್ವೇ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಕೊಡವ ವಾರಿಯರ್ಸ್ ಪಡೆದಿದ್ದಾರೆ. ವಿಜಯ ಸಾಧಿಸಿದ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.