ಮಡಿಕೇರಿ, ನ. 5: ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಒದಗಿಸುವಂತೆ ಹಾಗೂ ಭೂ ರಾಜಕೀಯ ಸ್ವಾಯತ್ತತೆಗೆ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಹಮ್ಮಿಕೊಳ್ಳಲಾಗಿದೆ.
ತಾ. 6 ರಂದು ಬಿ. ಶೆಟ್ಟಿಗೇರಿಯ ಪೂಪಳ್ಳಿ ಮಂದ್‍ನಲ್ಲಿ, ತಾ. 7 ರಂದು ಬೆಳಿಗ್ಗೆ 10:30 ಕ್ಕೆ ಬೀರುಗ ಗ್ರಾಮದ ಬೀರುಗ ಕೋಲ್ ಮಂದ್‍ನಲ್ಲಿ, ಸಂಜೆ 7 ಗಂಟೆಗೆ ಕಿರುಗೂರಿನ ಗುಮ್ಮತ್‍ಮಾಡ್ ಮಂದ್‍ನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.