ಗೋಣಿಕೊಪ್ಪ ವರದಿ, ನ. 5: ಕಾಂಗ್ರೆಸ್ ಪರಿಶಿಷ್ಟ ಪಂಗಡದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷರಾಗಿ ಚೆನ್ನಂಗಿ ಗ್ರಾಮದ ಪಿ.ಕೆ. ಸಿದ್ದಪ್ಪ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷೆ ಪಂಕಜಾ ನೇಮಕ ಪತ್ರ ಹಸ್ತಾಂತರ ಮಾಡಿದರು. ಈ ಸಂದರ್ಭ ರಾಜೀವ್ ಗಾಂಧಿ ವಿಚಾರ ಮಂಚ್ ಜಿಲ್ಲಾ ಅಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯೆ ಲೀಲಾವತಿ, ಪೊನ್ನಂಪೇಟೆ ಬ್ಲಾಕ್ ಪರಿಶಿಷ್ಟ ಘಟಕ ಅಧ್ಯಕ್ಷ ಮಣಿಕುಂಞÂ, ಪ್ರಮುಖರಾದ ಪಿ. ಸಿ.ರಾಮು, ಅಶೋಕ, ಮುರುಗೇಶ್ ಇದ್ದರು.