ಮಡಿಕೇರಿ, ನ. 5: ತಮ್ಮ ಮನೆಗಳ, ಕಚೇರಿಗಳ ಸಮೀಪದಲ್ಲೆ ಮತ ಚಲಾಯಿಸುವ ಬೂತ್ಗಳು ಇದ್ದರೂ ಆಲಸ್ಯತನ, ಬೇಜವಾಬ್ದಾರಿಯಿಂದ ಮತ ಚಲಾಯಿಸಲು ಜನರು ಹಿಂದೆ-ಮುಂದೆ ನೋಡುವ ಈ ಕಾಲಯುಗದಲ್ಲಿ , ಭೂಲೋಕದ ಹೊರಗಿನಿಂದಲೇ ಮತ ಚಲಾಯಿಸಿದ (ಓಂSಂ)ದ ಗಗನಯಾತ್ರಿ ಕೇಟ್ ರುಬಿನ್ಸ್ ಸರ್ವರಿಗೆ ಮಾದರಿಯಾಗಿದ್ದಾರೆ. ಅಮೇರಿಕಾದ ರಾಷ್ಟ್ರಪತಿ ಚುನಾವಣೆಗೆ ಕೇಟ್ ರುಬೆನ್ಸ್ ಐ.ಎಸ್.ಎಸ್ನ (ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ) ‘ವೋಟಿಂಗ್ ಬೂತ್’ ಮುಖಾಂತರ ಮತ ಚಲಾಯಿಸಿದ್ದಾರೆ. ಈ ಐ.ಎಸ್.ಎಸ್ ಭೂಮಿಯನ್ನು ದಿನಕ್ಕೆ 8 ಬಾರಿ ಸುತ್ತುವ ಒಂದು ಬಾಹ್ಯಾಕಾಶ ವಿಮಾನವಾಗಿದೆ. ಇಲ್ಲಿ ಅನೇಕ ಸಂಶೋಧನೆಗಳನ್ನು ಹಲವಾರು ಗಗನಯಾತ್ರಿಗಳು ವರ್ಷಪೂರ್ತಿ ಪಾಳಿ ವ್ಯವಸ್ಥೆಯಲ್ಲಿ ನಡೆಸುತ್ತಾರೆ. ಸಂಶೋಧನೆ ವೇಳೆ ಸುಮಾರು 6 ತಿಂಗಳುಗಳ ಕಾಲ ಅಲ್ಲೆ ವಾಸ್ತವ್ಯ ಹೂಡಬೇಕಾದ ಕಾರಣ ಈ ಅವಧಿಯಲ್ಲಿ ಭೂಮಿಗೆ ಬರಲು ಅಸಾಧ್ಯ. ಇದನ್ನು ಗಮನಿಸಿದ ಅಮೇರಿಕಾದ ಸರಕಾರ 1997 ರಲ್ಲಿ ಬಾಹ್ಯಾಕಾಶದಿಂದ ಮತ ಚಲಾಯಿಸು ವಂತೆ ‘ಬಿಲ್’ ಹೊರಡಿಸಿತ್ತು. ಇದಾದ ನಂತರ ಹಲವು ಗಗನಯಾತ್ರಿಯರು ಮತ ಚಲಾಯಿಸಿದ್ದಾರೆ.
ಹೇಗೆ ಸಾಧ್ಯ?
ಮತ ಚಲಾಯಿಸಲು ಇಚ್ಛಿಸುವವರು ಈeಜeಡಿಚಿಟ Posಣ ಅಚಿಡಿಜ ಂಠಿಠಿಟiಛಿಚಿಣioಟಿ (ಈPಅಂ) ಇದನ್ನು ಭರ್ತಿ ಮಾಡಬೇಕು. ಹೊರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೇರಿಕಾದ ಯೋಧರಿಗೂ ಇದು ಅನ್ವಯವಾಗುತ್ತದೆ. ಈ ಫಾರ್ಮ್ ಭರ್ತಿ ಮಾಡಿದ ನಂತರ ಮತ ಚಲಾಯಿಸಲು ಅರ್ಹರಾಗುತ್ತಾರೆ. ಗಗನಯಾತ್ರಿ ತರಬೇತಿ ಶಿಬಿರ ಅಮೇರಿಕಾದ ಟೆಕ್ಸಸ್ ರಾಜ್ಯದಲ್ಲಿರುವ ಕಾರಣ ಮತವನ್ನು ಬಾಹ್ಯಾಕಾಶದಿಂದ ಚಲಾಯಿಸುವ ಗಗನಯಾತ್ರಿಯರು ಈ ರಾಜ್ಯದ ಪ್ರಜೆಗಳಾಗಿಯೇ ಮತ ಚಲಾಯಿಸುತ್ತಾರೆ. ಒಂದು ವೇಳೆ ತಮ್ಮ ಸ್ವಂತ ರಾಜ್ಯದಿಂದ ಮತ ಚಲಾಯಿಸಲು ಬಯಸಿದ್ದಲ್ಲಿ ಅದನ್ನು ಕೂಡ ಹಲವು ವಿಶೇಷ ವ್ಯವಸ್ಥೆಗಳ ಮೂಲಕ ಮಾಡಬಹುದಾಗಿದೆ. ಟೆಕ್ಸಸ್ ರಾಜ್ಯದ ಹ್ಯೂಸ್ಟನ್ನ ‘ಜಾನ್ಸನ್ ಗಗನಯಾತ್ರಿ ತರಬೇತಿ ಶಿಬಿರಕ್ಕೆ’ ಚುನಾವಣಾ ಅಧಿಕಾರಿಯು ‘ಬ್ಯಾಲೆಟ್’ ಅನ್ನು ಕಳುಹಿಸಿಕೊಡು ತ್ತಾರೆ. ಇದರಲ್ಲಿ ಮತದಾರರ ಮಾಹಿತಿ ಭರ್ತಿಯಾದ ನಂತರ ಚುನಾವಣಾ ಅಧಿಕಾರಿಗೆ ವಾಪಸ್ ಕಳುಹಿಸಿಕೊಡ ಲಾಗುತ್ತದೆ. ಅವರು ‘ಬ್ಯಾಲೆಟ್’ನ ಎಲೆಕ್ಟ್ರಾನಿಕ್ ರೂಪವನ್ನು ಇ-ಮೇಲ್ ಮುಖಾಂತರ ಗಗನಯಾತ್ರಿಗೆ ಕಳುಹಿಸುತ್ತಾರೆ. ಇದು ಬಹಳ ಸುರಕ್ಷಿತವಾಗಿದ್ದು ಪಾಸ್ವರ್ಡ್ ಮುಖಾಂತರ ಗಗನಯಾತ್ರಿಗೆ ಮಾತ್ರ ಮತದಾನ ಮಾಡಲು ಸಾಧ್ಯವಾಗುತ್ತದೆ. ಸುರಕ್ಷಿತವಾದ ಈ ‘ಬ್ಯಾಲೆಟ್’ ಚುನಾವಣಾ ಅಧಿಕಾರಿಗೆ ಇ-ಮೇಲ್ ಮುಖಾಂತರ ತಲುಪಲಿದ್ದು ಅಧಿಕಾರಿಯು ಪಾಸ್ವರ್ಡ್ ಮುಖಾಂತರ ಮತದಾನವನ್ನು ಅಧಿಕೃತವಾಗಿ ದಾಖಲಿಸಿಕೊಳ್ಳಬಹುದು.