ಸೋಮವಾರಪೇಟೆ, ನ. 5: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಮಾವನೇ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.ಬೆಟ್ಟದಕೊಪ್ಪ ಗ್ರಾಮದ ಬಿ.ಎ. ಹೂವಯ್ಯ ಅವರ ಪತ್ನಿ ತೀರ್ಥ (36) ಎಂಬಾಕೆಯೇ ಮಾವನಿಂದ ಗುಂಡಿನ ಧಾಳಿಗೆ ತುತ್ತಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದವರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಾವ ಅಯ್ಯಪ್ಪ ಎಂಬಾತ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿದ್ದು, ಸೊಸೆಯ ಎಡ ತೋಳು, ಎದೆಯ ಕೆಳಭಾಗಕ್ಕೆ ಗಾಯಗಳಾಗಿವೆ.ತಕ್ಷಣ ಗಾಯಾಳು ತೀರ್ಥ ಅವರನ್ನು ಸ್ಥಳೀಯರು ಪಿಕ್‍ಅಪ್ ವಾಹನದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಮಡಿಕೇರಿ ಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.ಘಟನೆಯ ವಿವರ: ಬೆಟ್ಟದಕೊಪ್ಪ ಗ್ರಾಮದ ಅಯ್ಯಪ್ಪ ಅವರಿಗೆ ಓರ್ವ ಪುತ್ರ ಹಾಗೂ ಈರ್ವರು ಪುತ್ರಿ ಯರಿದ್ದು, ಮಗ ಹೂವಯ್ಯ ಪಕ್ಕದ ಜಾಗದಲ್ಲಿಯೇ ಪ್ರತ್ಯೇಕವಾಗಿ ವಾಸ ವಾಗಿದ್ದಾರೆ. ಈರ್ವರು ಪುತ್ರಿಯರು ತಮ್ಮ ಸಂಸಾರ ಸಹಿತ ತಂದೆ ತಾಯಿಯೊಂದಿಗೆ ವಾಸ ವಾಗಿದ್ದು, ಅಯ್ಯಪ್ಪ ಹಾಗೂ ಹೂವಯ್ಯ ಅವರುಗಳ ನಡುವೆ ಈ ಹಿಂದಿ ನಿಂದಲೂ ಆಸ್ತಿ ವಿಚಾರವಾಗಿ ಗಲಾಟೆ ಗಳು ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಈ ಬಗ್ಗೆ ಹಲವಷ್ಟು ಬಾರಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎರಡೂ ಕಡೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿಕೊಡ ಲಾಗುತ್ತಿತ್ತು. ಈ ನಡುವೆ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀರ್ಥ ಅವರು ಹಸುವನ್ನು ಕರೆತರಲೆಂದು ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ, ಮಾವ ಅಯ್ಯಪ್ಪ ಅವರು ಜಗಳ ತೆಗೆದು ‘ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲ’ ಎಂದು ಕೋವಿ ಯಿಂದ ಗುಂಡು ಹಾರಿಸಿದ್ದಾರೆ.

ಪರಿಣಾಮ ತೀರ್ಥ ಅವರ ಎಡ ತೋಳು, ಎದೆಯ ಕೆಳಭಾಗಕ್ಕೆ ಗಾಯ ಗಳಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ತೀರ್ಥ ಅವರ ಪುತ್ರಿ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ತೀರ್ಥ ಅವರ ಪತಿ ಹೂವಯ್ಯ ಓಡಿ ಬಂದಿದ್ದು, ರಕ್ತದ ಮಡುವಿನಲ್ಲಿದ್ದ ಪತ್ನಿಯನ್ನು ಸ್ಥಳೀಯರ ಸಹಕಾರ ದೊಂದಿಗೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ನಂತರ ಆರೋಪಿ ಅಯ್ಯಪ್ಪ ಸೇರಿದಂತೆ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ

(ಮೊದಲ ಪುಟದಿಂದ) ತೀರ್ಥ ಅವರ ಪತಿ ಹಾಗೂ ಪುತ್ರಿಯಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಹೂವಯ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತಂದೆ ಅಯ್ಯಪ್ಪ, ತಾಯಿ ಸೀತಮ್ಮ, ಸಹೋದರಿಯರಾದ ಗುಣ ಹಾಗೂ ಪ್ರತಿಮಾ ಅವರುಗಳು ಆಗಾಗ್ಗೆ ಜಗಳ ತೆಗೆಯುತ್ತಿದ್ದು, ಇಂದು ಬೆಳಿಗ್ಗೆ ಅಯ್ಯಪ್ಪ ಅವರು ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೋಮವಾರಪೇಟೆ ಅಪರಾಧ ವಿಭಾಗದ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ ಅವರು ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿ ಶಿವಕುಮಾರ್ ಅವರುಗಳು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.