ಮಡಿಕೇರಿ, ನ. 5: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯು (ಎನ್‍ಟಿಎ) ಶಿಕ್ಷಣ ಸಚಿವಾಲಯ, ಭಾರತ ಸರ್ಕಾರದಡಿ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ/ ಸ್ವಾಯತ್ತ, ಸ್ವಾವಲಂಬಿ ಹಾಗೂ ಸ್ವಯಂನಿರಂತರ ಸರ್ವ ಶ್ರೇಷ್ಠ ಟೆಸ್ಟಿಂಗ್ ಸಂಸ್ಥೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯು (ಎನ್‍ಟಿಎ) ಅವರು 2021-22ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್‍ಎಸ್‍ಇಇ (ಂISSಇಇ)-2021 ಪ್ರವೇಶ ಪರೀಕ್ಷೆ ನಡೆಸುವುದು. ಸೈನಿಕ ಶಾಲೆಗಳು ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಗಳಾಗಿ ಸಿಬಿಎಸ್‍ಇ ಅಂಗ ಸಂಸ್ಥೆಗಳಾಗಿವೆ ಮತ್ತು ಸೈನಿಕ ಶಾಲಾ ಸೊಸೈಟಿಯಿಂದ (ರಕ್ಷಣಾ ಸಚಿವಾಲಯದ ಅಡಿಯಲ್ಲಿ) ಕಾರ್ಯ ನಿರ್ವಹಿಸುತ್ತಿವೆ. ಈ ಶಾಲೆಗಳು ಅಧಿಕಾರಿಗಳನ್ನಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಇತರ ಟ್ರೈನಿಂಗ್ ಅಕಾಡೆಮಿಗಳಿಗಾಗಿ ಅಭ್ಯರ್ಥಿಗಳನ್ನು ತಯಾರು ಮಾಡುವುದಾಗಿದೆ.

ಪರೀಕ್ಷೆಯು, 2021 ರ ಜನವರಿ 10 ರಂದು ನಡೆಯಲಿದೆ. ಪರೀಕ್ಷೆಯ ಮಾದರಿ ಪೆನ್ ಪೇಪರ್ (ಒಎಂಆರ್ ಶೀಟ್ ಆಧಾರಿತ), ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮೂನೆ ಬಹು ಆಯ್ಕೆ ಪ್ರಶ್ನೆಗಳು, ಪರೀಕ್ಷೆಯ ನಗರಗಳು ಮಾಹಿತಿ ಕೈಪಿಡಿಯಲ್ಲಿ ಸೂಚಿಸಿರುವಂತೆ, 6ನೇ ತರಗತಿಗೆ ಅರ್ಹತೆ ಅಭ್ಯರ್ಥಿಗಳು 2021 ರ ಮಾರ್ಚ್ 31 ರಂತೆ ಮತ್ತು 12 ವರ್ಷಗಳ ನಡುವೆ ಇರಬೇಕು. 6ನೇ ತರಗತಿಯಲ್ಲಿ ಬಾಲಕ ಮತು ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿರುತ್ತದೆ. 10ನೇ ತರಗತಿಗೆ ಅರ್ಹತೆ ಅಭ್ಯರ್ಥಿಗಳು 2021ರ ಮಾರ್ಚ್ 31 ರಂತೆ 13 ಮತ್ತು 15 ವರ್ಷಗಳ ನಡುವೆ ಇರಬೇಕು. ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಪರೀಕ್ಷಾ ಶುಲ್ಕ ರೂ. 400 ಪ.ಜಾ-ಪ.ಪಂ.ಗಳಿಗೆ ಮತ್ತು ಇತರರಿಗೆ ರೂ. 550 ಆಗಿರುತ್ತದೆ.

ಪರೀಕ್ಷೆಗೆ ಸಂಬಂಧಿಸಿದ ಯೋಜನೆ/ಕಾಲವಧಿ/ಮಾಧ್ಯಮ/ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ನಗರಗಳು / ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು ಇತ್ಯಾದಿಗಳು ವೆಬ್‍ಸೈಟ್: ತಿತಿತಿ.ಟಿಣಚಿ.ಚಿಛಿ.iಟಿ ಯಲ್ಲಿರುವ ಮಾಹಿತಿ ಕೈಪಿಡಿಯಲ್ಲಿ ಲಭ್ಯವಿರುವುದು. 2021ರ ಎಐಎಸ್‍ಎಸ್‍ಇಇ ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ವಿವರವಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿರಬೇಕು ಹಾಗೂ ಆನ್‍ಲೈನ್ ಮೂಲಕ ಮಾತ್ರ ವೆಬ್‍ಸೈಟ್: hಣಣಠಿs://ಚಿissee.ಟಿಣಚಿ.ಟಿiಛಿ.iಟಿ ಸಹಾಯದಿಂದ ತಾ. 19 ರೊಳಗೆ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸುವ ಅವಶ್ಯವಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಸಂಪರ್ಕಕ್ಕಾಗಿ ವಿಳಾಸ: ಬ್ಲಾಕ್ ಸಿ-20, 1ಎ/8. ಐಐಟಿಕೆ ಔಟ್ ರೀಚ್ ಸೆಂಟರ್, ಸೆಕ್ಟರ್ 62, ನೋಯ್ಡಾ ಗೌತಮ್ ಬುದ್ದ ನಗರ್ ಜಿಲ್ಲೆ, ಉತ್ತರಪ್ರದೇಶ-201 309, ಈ ಮೇಲೆ ನಮೂದಿಸಿರುವ ಎರಡು ಅಂರ್ತಜಾಲ ಲಿಂಕ್‍ಗಳನ್ನು ನಮ್ಮ ಶಾಲಾ ವೆಬ್ಸ್‍ಸೈಟ್: ತಿತಿತಿ.sಚಿiಟಿiಞsಛಿhooಟಞoಜಚಿgu.eಜu.iಟಿ ನಲ್ಲಿ ಕೂಡ ತೆರೆಯಬಹುದಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯ ಹಿರಿಯ ನಿರ್ದೇಶಕರು ತಿಳಿಸಿದ್ದಾರೆ.